ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಮಯ್ಯರಿಂದ ಹಿಂದೂ ಸಮಾಜ ಒಡೆವ ಪ್ರಯತ್ನ: ಪ್ರತಾಪ್ ಸಿಂಹ ಆರೋಪ
ಬೆಂಗಳೂರು: ಅಧಿಕಾರದಲ್ಲಿ ಮುಂದುವರಿಯಲು ಸಿದ್ದರಾಮಯ್ಯರಿಂದ ಹಿಂದೂ ಸಮಾಜ ಒಡೆವ ಪ್ರಯತ್ನ ಮಾಡುತ್ತಿದ್ದಾರೆಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹಿಂದೆ 2006ರಲ್ಲಿ ಅವರು ಅಹಿಂದ ಹೆಸರಲ್ಲಿ ಅಲ್ಪಸಂಖ್ಯಾತರು,
ದಲಿತರ ಮತ್ತು ಹಿಂದುಳಿದ ವರ್ಗಗಳನ್ನು ಹಿಂದೂಗಳಿಂದ ಬೇರೆ ಮಾಡಿದರು, ಈಗ ಕೇವಲ ಅಧಿಕಾರದಲ್ಲಿ ಮುಂದುವರಿಯವುದಕ್ಕೋಸ್ಕರ ಇಡೀ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಾತಿ ಜನಗಣತಿಯಲ್ಲೂ ಬ್ರಾಹ್ಮಣರ ಸಂಖ್ಯೆ ಕಡಿಮೆ ತೋರಿಸಲಾಗಿದೆ, ಅವರೇನೂ ಹೇಳಲ್ಲ ಅಂತನಾ? ಜನಿವಾರವೇ ಒಂದು ಸಮಸ್ಯೆ ಅಂತ ಅನ್ಕೊಂಡು ಜನಿವಾರವನ್ನೇ ತೆಗೆಸುವ ಕೆಲಸ ಆಗಿದೆ. ಇದು ಹಿಂದೂಗಳ ಮೇಲಿನ ಆಕ್ರಮಣ. ಹಿಂದೂ ಸಮಾಜ ಒಟ್ಟಾಗಿ ಜನಿವಾರ ಪ್ರಕರಣ ವಿರೋಧಿಸಬೇಕು ಎಂದು ಹೇಳಿದರು.