ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ಖರೀದಿಸುವ ಮುಂಚೆ ನಿಮ್ಮ ನಗರದಲ್ಲಿ ಬೆಲೆ ಎಷ್ಟು ತಿಳಿಯಿರಿ
ಬೆಂಗಳೂರು: ಚಿನ್ನ ಬರೀ ಅಲಂಕಾರಕ್ಕಾಗಿ ಅಲ್ಲ, ಇದು ಆಪತ್ಕಾಲದ ಬಂಧುವಾಗಿ ಜನರ ಜೀವನದಲ್ಲಿ ಮುಖ್ಯವಾಗಿದೆ. ಯಾವುದೇ ಹಣದ ಸಮಸ್ಯೆ ಬಂದರೂ ಚಿನ್ನ ಅಡವಿಟ್ಟು, ಮಾರಿಯಾದರೂ ಹಣ ಪಡೆದುಕೊಳ್ಳಬಹುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಚಿನ್ನ ಪ್ರಮುಖ ಲೋಹವಾಗಿ ಗುರುತಿಸಿಕೊಳ್ಳುತ್ತಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ.
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 350 ರೂ ಏರಿಕೆ ಆಗಿದೆ. ಇಂದಿನ ಬೆಲೆ 87,550 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 380 ರೂ ಹೆಚ್ಚಳ ಆಗಿ, ಇಂದಿನ ಬೆಲೆ 95,510 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,755 ರೂ ಇದೆ. ಬೆಳ್ಳಿಯ ಬೆಲೆ 1 ರೂ ಹೆಚ್ಚಳ ಆಗಿದೆ. 98 ಕ್ಕೆ ಗ್ರಾಂ ಬೆಲೆ ಹೆಚ್ಚಾಗಿದ್ದು ಕೆಜಿ ಬೆಳ್ಳಿ ಬೆಲೆ 98,000 ರೂ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 35 ರೂಪಾಯಿ ಹೆಚ್ಚಳ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,755 ರೂ ಆಗಿದೆ, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 38 ರೂ ಹೆಚ್ಚಳ ಆಗಿ, 9,551 ರೂ ಗೆ ಹೆಚ್ಚಳ ಆಗಿದೆ.