ತಮನ್ನಾ ಆಯ್ಕೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ವಿ: ಸಚಿವ ಎಂ.ಬಿ ಪಾಟೀಲ್
ಬೆಂಗಳೂರು: ತಮನ್ನಾ ಆಯ್ಕೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ವಿ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೊಸ ಸೋಪುಗಳನ್ನು ಪರಿಚಯ ಮಾಡಿದ್ದೇವೆ.
ನಾವು ಈಗ ಪರ್ ಫ್ಯೂಮ್ ಮಾರ್ಕೆಟ್ಗೂ ಕಾಲಿಡ್ತಿದ್ದೇವೆ. ಇದು 5 ಸಾವಿರ ಕೋಟಿ ಬ್ಯುಸಿನೆಸ್ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ತಮನ್ನಾ ಆಯ್ಕೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ವಿ, ಅವರು ಬೇರೆ ಕಡೆ ಸೈನ್ ಮಾಡಿದ್ದೇನೆ ಆಗಲ್ಲ ಅಂದ್ರು.
ಶ್ರೀಲೀಲಾ ಅವರನ್ನು ಸಂಪರ್ಕಿಸಿದ್ವಿ, ಅವ್ರು ಆಗಲ್ಲ ಅಂದ್ರು. ಪೂಜಾ ಗಾಂಧಿ, ಕಿಯಾರಾ ಅಡ್ವಾಣಿ ಅವರು ಕೂಡ ಆಗೋದಿಲ್ಲ ಬೇರೆ ಕಮೀಟ್ಮೆಂಟ್ ಇದೆ ಎಂದ್ರು. ಹಾಗಾಗಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ. ಕನ್ನಡಿಗರನ್ನ ನಾವು ಕೂಡ ಸಂಪರ್ಕಿಸಿದ್ವಿ, ಆದ್ರೆ ಅವ್ರು ಫ್ರೀ ಇರಲಿಲ್ಲ.
ಯಾರೇ ರಾಯಭಾರಿ ಆದ್ರೂ ಎರಡು ವರ್ಷ ಲಾಕ್ ಆಗ್ತಾರೆ. ದೀಪಿಕಾ ಪಡುಕೋಣೆ ನಮ್ಮ ಬಜೆಟ್ಗೆ ಎಟುಕದವರು, ಹೀಗಾಗಿ ಅವರನ್ನು ಸಂಪರ್ಕ ಮಾಡಿಲ್ಲ. ಕನ್ನಡಕ್ಕೆ ಅವಮಾನ ಮಾಡಬೇಕು ಅಂತ ಉದ್ದೇಶ ಇಲ್ಲ. ಮುಂದೆ ವಿದೇಶಿಯವರನ್ನೂ ರಾಯಭಾರಿಯಾಗಿ ಆಯ್ಕೆ ಮಾಡುವ ಉದ್ದೇಶ ಇದೆ ಎಂದು ಹೇಳಿದರು.