ಸದ್ಯದಲ್ಲೇ ಆಂಟಿ ಕಮ್ಯೂನಲ್ ಫೋರ್ಸ್ ಕಾರ್ಯೋನ್ಮುಖ ಆಗುತ್ತದೆ: ದಿನೇಶ್ ಗುಂಡೂರಾವ್
ಮಂಗಳೂರು: ಸದ್ಯದಲ್ಲೇ ಆಂಟಿ ಕಮ್ಯೂನಲ್ ಫೋರ್ಸ್ ಕಾರ್ಯೋನ್ಮುಖ ಆಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ.
ಎಲ್ಲರು ಸೇರಿ ಭಾಗವಹಿಸಬೇಕು, ಭ್ರಾತೃತ್ವ ವಾತಾವರಣ ನಿರ್ಮಾಣ ಆಗಬೇಕು. 95% ಜನರಿಗೆ ಇದು ಬೇಕಾಗಿಲ್ಲ, ಕೆಲವೇ ಕೆಲವು ಜನ ಹಾಗೂ ಸಂಘಟನೆಗಳು ಇದಕ್ಕೆ ಪ್ರಚೋದನೆ ಮಾಡುತ್ತಿವೆ. ಜನ ಸುವ್ಯವಸ್ಥೆ, ಶಾಂತಿ ಬಯಸುತ್ತಿದ್ದಾರೆ. ಸುಮ್ಮನಿದ್ದರೆ ಇಂತಹ ಧ್ವನಿಗಳು ಹೆಚ್ಚಾಗುತ್ತವೆ.
ಎರಡೂ ಕಡೆ ಸಂಘಟನೆ ಹಾಗೂ ಪ್ರಚೋದನೆ ಮಾಡುತ್ತಿದ್ದಾರೆ. ನಾನು ಹಿಂದೂ, ಮುಸ್ಲಿಂ ಅನ್ನಲ್ಲ, ಎರಡೂ ಕಡೆ ಇದೆ. ಅದರ ವಿರುದ್ಧ ವಿಶೇಷ ಕ್ರಮ ಆಗಬೇಕು. ಸದ್ಯದಲ್ಲೇ ಆಂಟಿ ಕಮ್ಯೂನಲ್ ಫೋರ್ಸ್ ಕಾರ್ಯೋನ್ಮುಖ ಆಗುತ್ತದೆ ಎಂದು ತಿಳಿಸಿದರು.