ಬಂಗಾರ ಪ್ರಿಯರು ಓದಲೇ ಬೇಕಾದ ಸುದ್ದಿ! ಇಂದಿನ ಚಿನ್ನದ ಬೆಲೆ ನೋಡಿದ್ರೆ ಶಾಕ್ ಆಗ್ತೀರಾ
ಚಿನ್ನ ಇದ್ರೆ ನಗದು ರೂಪದ ಹಣವಿದ್ದಂತೆ ಮತ್ತು ಆರ್ಥಿಕವಾಗಿ ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುತ್ತದೆ ಎಂಬ ದೃಷ್ಟಿಯಿಂದಲೇ ಬಂಗಾರ ಹೆಚ್ಚು ಖರೀದಿಯಲ್ಲಿದೆ.
ಅಲ್ಲದೆ, ಕಳೆದ ಹಲವು ದಶಕಗಳಿಂದ ಚಿನ್ನದ ಬೆಲೆ ಏರುತ್ತಲೇ ಬಂದಿರುವುದರಿಂದ ಚಿನ್ನವು ಹೂಡಿಕೆಯ ವಿಷಯದಲ್ಲೂ ಬೆಸ್ಟ್ ಎನಿಸಿಕೊಂಡಿದೆ. ಭಾರಿ ಮಹತ್ವ ಪಡೆದುಕೊಂಡಿರುವ ಬಂಗಾರ-ಬೆಳ್ಳಿಯ ರೇಟ್ ಇಂದು ಎಷ್ಟಿದೆ ಅಂತಾ ನೋಡೋಣ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 33 ರೂಪಾಯಿ ಹೆಚ್ಚಳ ಆಗಿದೆ. ಇಂದಿನ ಚಿನ್ನದ ದರ 24 ಕ್ಯಾರೆಟ್ 1 ಗ್ರಾಂ ಗೆ 9,764 ರೂ ಆಗಿದೆ, 22 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 30 ರೂ ಹೆಚ್ಚಳ ಆಗಿ, 8,950 .ರೂಗೆ ಏರಿಕೆ ಆಗಿದೆ.
10 ಗ್ರಾಂ ಬೆಲೆ ಎಷ್ಟು?
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 330 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ 97,640 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆ ಆಗಿ, ಇಂದಿನ ಬೆಲೆ 89,500 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 9,764 ರೂ ಇದೆ. ಬೆಳ್ಳಿಯ ಬೆಲೆ ಕೂಡಾ 10 ಪೈಸೆ ಹೆಚ್ಚಳ ಆಗಿದ್ದು, ಕೆಜಿ ಬೆಳ್ಳಿ ಬೆಲೆ 1,00,000 ರೂ ಇದೆ.