ಎಂಪಿ ತುಕಾರಾಂ ಸಭ್ಯಸ್ಥ ವ್ಯಕ್ತಿ.. ರಾಜಕೀಯ ಕಾರಣದಿಂದ ಇಡಿ ದಾಳಿ ನಡೆದಿದೆ – ಅಶೋಕ್ ಪಟ್ಟಣ!
ಬೆಂಗಳೂರು:- ಎಂಪಿ ತುಕಾರಾಂ ಸಭ್ಯಸ್ಥ ವ್ಯಕ್ತಿ.. ರಾಜಕೀಯ ಕಾರಣದಿಂದ ಇಡಿ ದಾಳಿ ನಡೆದಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಂಸದ ತುಕಾರಾಂ, ಶಾಸಕ ನಾಗೇಂದ್ರ ಸೇರಿದಂತೆ ಹಲವರ ಮೇಲೆ ಇಡಿ ದಾಳಿ ಮಾಡಿದೆ. ಎಂಪಿ ತುಕಾರಾಂ ಸಭ್ಯಸ್ಥ ವ್ಯಕ್ತಿ. ಬಳ್ಳಾರಿಯಲ್ಲಿ ಕಾಂಗ್ರೆಸ್‌ನವರ ಮೇಲೆ ದಾಳಿ ನಡೆದಿದೆ. ಇಡಿ ದಾಳಿ ಮಾಡಿ ತೇಜೊವಧೆಗೆ ಮಾಡೋ ಕೆಲಸ ಮಾಡ್ತಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದೆ. ಈಗ ದಾಳಿ ಮಾಡ್ತಿರೋದಕ್ಕೆ ರಾಜಕೀಯ ಕಾರಣ ಇದೆ ಅಂತ ಆರೋಪ ಮಾಡಿದರು
ಚುನಾವಣೆಗೆ ಹಣ ಬಳಕೆಯಾಗಿದೆ ಅನ್ನೋದಕ್ಕೆ ತನಿಖೆ ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗ್ತಿದೆ. ತನಿಖೆಯಲ್ಲಿ ತಪ್ಪಾಗಿರೋದು ಕಂಡು ಬಂದ್ರೆ ಶಿಕ್ಷೆಯಾಗಲಿ. ಅದು ಬಿಟ್ಟು ಹೀಗೆ ತೇಜೋವಧೆ ಮಾಡೋದು ಸರಿಯಲ್ಲ ಎಂದರು.
ನಾಗೇಂದ್ರ ಅವರನ್ನ ಮತ್ತೆ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಗೇಂದ್ರ ಅವರನ್ನ ಸಂಪುಟಕ್ಕೆ ತೆಗೆದುಕೊಳ್ಳೋದು ಹೈಕಮಾಂಡ್, ಸಿಎಂಗೆ ಬಿಟ್ಟಿದ್ದು ಎಂದು ತಿಳಿಸಿದರು.