ಮೀಡಿಯಾ ಮಂದಿಗೆ ಗುಡ್ ನ್ಯೂಸ್
ದಿ ನ್ಯೂ ಇಂಡಿಯನ್ ಟೈಮ್ಸ್ ಕಡೆಯಿಂದ ಮೀಡಿಯಾ ಮಂದಿಗೆ ಗುಡ್ ನ್ಯೂಸ್. ಸತತ ಏಳು ವರ್ಷಗಳಿಂದ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಾ ಬಂದಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತ ಬರಲಾಗುತ್ತಿದೆ. ಬೆಸ್ಟ್ ಆ್ಯಂಕರ್ , ರಿಪೋರ್ಟರ್, ವೀಡಿಯೋ ಎಡಿಟರ್ , ವಾಯ್ಸ್ ಓವರ್ ಆರ್ಟಿಸ್ಟ್ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಹೆಮ್ಮೆಯ ವಿಚಾರವೆಂದರೆ ಟಿಎನ್ ಐಟಿ ಏಕೈಕ ಸಂಸ್ಥೆ ಇಷ್ಟು ವರ್ಷಗಳಿಂದ ಯಶಸ್ವಿಯಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನ ಮಾಡುತ್ತಾ ಬಂದಿದೆ. ಕಳೆದ ಬಾರಿ ದಕ್ಷಿಣ ಭಾರತದ ಸುದ್ದಿವಾಹಿನಿಗಳಿಗೆ ಪ್ರಶಸ್ತಿಯನ್ನ ನೀಡಿ ಸೈ ಎನ್ನಿಸಿಕೊಂಡಿತ್ತು.
ಟಿಎನ್ ಐಟಿ ಸಂಸ್ಥೆಯ ಎಂಡಿ ರಘು ಭಟ್ ಅವರ ಉಪಸ್ಥಿಯಲ್ಲಿ ಹಾಗೂ ಮೀಡಿಯಾ ದಿಗ್ಗಜರ ಮಾರ್ಗದರ್ಶನದಲ್ಲಿ ಟಿಎನ್ ಐಟಿ ಮೀಡಿಯಾ ಅವಾರ್ಡ್ ಯಶಸ್ವಿಯಾಗಿ ಸಾಗುತ್ತಿದೆ. ಈಗ ಖುಷಿ ವಿಚಾರ ಅಂದ್ರೆ ಎಂಟನೇ ವರ್ಷದ ಟಿಎನ್ ಐಟಿ ಮೀಡಿಯಾ ಅವಾರ್ಡ್ ಬರುತ್ತಿದೆ. ಈ ಬಾರಿಯೂ ಕೂಡ ಸೌಥ್ ಇಂಡಿಯಾ ಮೀಡಿಯಾ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಮತ್ತಷ್ಟು ಹೊಸತನದೊಂದಿಗೆ ಈ ಬಾರಿ ಮೀಡಿಯಾ ಅವಾರ್ಡ್ ನಡೆಯಲಿದ್ದು ಪ್ರತಿ ಬಾರಿಯಂತೆ ಈ ಬಾರಿಯೂ ನಿಮ್ಮ ಸಹಕಾರವಿರಲಿ.