ದ್ವೇಷ ಭಾಷಣವನ್ನು ಯಾರೇ ಮಾಡಿದರೂ ನೋಟಿಸ್ ಜಾರಿ ಆಗುತ್ತದೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ದ್ವೇಷ ಭಾಷಣವನ್ನು ಯಾರೇ ಮಾಡಿದರೂ ನೋಟಿಸ್ ಜಾರಿ ಆಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆಯವರಿಗೆ ಕುಂದಾಪುರ ಠಾಣೆ ಪೊಲೀಸರಿಂದ ನೋಟಿಸ್ ಜಾರಿಯಾಗಿರುವುದರ ಕುರಿತು ಮಾತನಾಡಿ,
ದ್ವೇಷ ಭಾಷಣ ಯಾರು ಮಾಡಿದರೂ ನೋಟಿಸ್ ಜಾರಿಯಾಗೇ ಆಗುತ್ತದೆ. ಭಾಷಣ ಸರಿಯಾಗಿದ್ದರೆ, ಯಾಕೆ ನೋಟಿಸ್ ಜಾರಿಯಾಗುತ್ತದೆ?” ಎಂದು ಪ್ರಶ್ನಿಸಿದರು.
ನಾನಾದರೂ ಸರಿ, ಯಾರೇ ಆದರೂ ಸರಿ, ದ್ವೇಷ ಭಾಷಣವನ್ನು ಯಾರೇ ಮಾಡಿದರೂ ನೋಟಿಸ್ ಜಾರಿ ಆಗುತ್ತದೆ. ರಾಹುಲ್ ಗಾಂಧಿಯವರು ಯಾವ ದ್ವೇಷ ಭಾಷಣ ಮಾಡಿದ್ದರು ಎಂದು ಅವರನ್ನು ಟಾರ್ಗೆಟ್ ಮಾಡಿ ಪ್ರಕರಣ ದಾಖಲಿಸಲಾಗಿತ್ತು? ಎಂದು ಹೇಳಿದ್ದಾರೆ.