ಚೆಕ್ಡ್ಯಾಂನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು..!
ವಿಜಯನಗರ: ಚೆಕ್ಡ್ಯಾಂನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದ ಬಳಿ ನಡೆದಿದೆ.
ಅರವಿಂದ(13) ಮತ್ತು ಹನುಮಂತ(13) ಮೃತ ಬಾಲಕರಾಗಿದ್ದು, ಚೆಕ್ಡ್ಯಾಂನಲ್ಲಿ ಈಜುವಾಗ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಹೊಸಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.