ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ಅಧಿಕಾರಿಗಳಿಗೆ ಲೋಕಾ ಶಾಕ್
ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳುಬೆಳಗ್ಗೆಯೇ ಭ್ರಷ್ಟರ ಬೇಟೆ ಕಾರ್ಯಾಚರಣೆಗೆ ಇಳಿದಿದ್ದುಬೆಂಗಳೂರು, ಶಿವಮೊಗ್ಗ, ಧಾರವಾಡ ಸೇರಿ ಹತ್ತಾರು ಕಡೆಗಳಲ್ಲಿ ದಾಳಿ ನಡೆದಿದೆ. ಶಿವಮೊಗ್ಗದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್,
ಚಿಕ್ಕಮಗಳೂರಿನ ಯುವ ಪುರಸಭೆಯ ಲೆಕ್ಕಾಧಿಕಾರಿ ಶ್ರೀಮತಿ ಲತಾ ಮಣಿ, ಆನೇಕಲ್ನ ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಕೆ.ಜಿ. ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್,
ಧಾರವಾಡದ ಮಲಪ್ರಭಾ ಪ್ರಾಜೆಕ್ಟ್ನ ಇಂಜಿನಿಯರ್ ಅಶೋಕ್ ವಲ್ಸಂದ್, ಕಲ್ಬುರ್ಗಿಯ ಆರ್ಡಿಪಿಆರ್ನ ಮಾಜಿ ಇಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ, ಮತ್ತು ಕಲ್ಬುರ್ಗಿಯ ಪಿಡಿಒ ರಾಮಚಂದ್ರ ಇವರೆಲ್ಲರ ವಿರುದ್ಧವೂ ತನಿಖೆ ಆರಂಭವಾಗಿದೆ.