ಇಂದಿನಿಂದ ಶ್ರೀ ಜಗನ್ನಾಥ ರಥಯಾತ್ರೆ ಪ್ರಾರಂಭ: ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇಂದಿನಿಂದ ಪುರಿಯಲ್ಲಿ ಪ್ರಾರಂಭವಾಗುವ ಜಗನ್ನಾಥ ರಥಯಾತ್ರೆ 9 ದಿನಗಳ ಕಾಲ ನಡೆಯಲಿದೆ. ಪುರಿ ಜಗನ್ನಾಥ ಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ. ದೇವರು ಪ್ರತಿಯೊಬ್ಬರಿಗೂ ಖುಷಿ, ಸಮೃದ್ಧಿ, ಅದೃಷ್ಟ ಹಾಗೂ ಅದ್ಬುತ ಆರೋಗ್ಯ ನೀಡುವಂತೆ ಕೋರಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ”ಜಗನ್ನಾಥ ರಥಯಾತ್ರೆಯ ಪವಿತ್ರ ಸಂದರ್ಭದಲ್ಲಿ, ದೇಶದ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.
ನಂಬಿಕೆ ಮತ್ತು ಭಕ್ತಿಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಅತ್ಯುತ್ತಮ ಆರೋಗ್ಯವನ್ನು ತರಲಿ” ಎಂದಿದ್ದಾರೆ. ಜಗನ್ನಾಥ ರಥಯಾತ್ರೆಯ ಜೊತೆಗೆ, ಹಿಂದೂ ಕ್ಯಾಲೆಂಡರ್ ಪ್ರಕಾರ ಆಷಾಢ ಮಾಸದ ಎರಡನೇ ದಿನದಿಂದ ಪ್ರಾರಂಭವಾಗುವ ಕಚ್ ಹೊಸ ವರ್ಷಕ್ಕೂ ಪ್ರಧಾನಿ ಶುಭ ಕೋರಿದ್ದಾರೆ.