Bigg Boss Kannada season 12: ಬಿಗ್ ಬಾಸ್ ಫ್ಯಾನ್ಸ್’ಗೆ ಗುಡ್ ನ್ಯೂಸ್! ಕಿಚ್ಚ ಸುದೀಪ್ ನಿರೂಪಣೆ ಖಚಿತ
ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಕನ್ನಡದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದರಂತೆ ಇದೀಗ ವಾಹಿನಿ ಅವರು ಬಿಗ್ ಬಾಸ್ ಸೀಸನ್ 12ರ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 12ನ್ನು ಸುದೀಪ್ ಅವರು ನಿರೂಪಣೆ ಮಾಡುವುದು ಖಚಿತವಾಗಿದೆ. ‘ಬಿಗ್ ಬಾಸ್ ಸೀಸನ್ 11’ರ ಕೊನೆಯಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಸುದೀಪ್ ಕೊಟ್ಟ ಆ ಒಂದು ಹೇಳಿಕೆ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಸುದೀಪ್ ತಮ್ಮ ಈ ನಿರೂಪಣೆಯ ಪಯಣಕ್ಕೆ ವಿದಾಯ ಹೇಳಿದ್ದರು. ಆದ್ರೆ ಇದನ್ನು ಅಭಿಮಾನಿಗಳು ಸ್ವೀಕರಿಸಿರಲಿಲ್ಲ. ಮುಂದಿನ ಸೀಸನ್ಗಳನ್ನೂ ಸುದೀಪ್ ಅವರೇ ನಿರೂಪಿಸಬೇಕೆಂದು ಒತ್ತಾಯಗಳು ಕೇಳಿಬಂದಿದ್ದವು.
ಅಭಿಮಾನಿಗಳ ಬೇಡಿಕೆಯಂತೆ, ಬಿಗ್ ಬಾಸ್ ಸೀಸನ್ 12ಕ್ಕೆ ಕಿಚ್ಚನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೌದು, ಇಂದು ಬಿಗ್ ಬಾಸ್ ತಂಡದಿಂದ ಅಧಿಕೃತ ಅನೌನ್ಸ್ಮೆಂಟ್ ಆಗಿದೆ. ಖಾಸಗಿ ಹೋಟೆಲ್ನಲ್ಲಿ ಬಿಗ್ ಬಾಸ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಪೂರೈಸಿದೆ. ಬಿಗ್ಬಾಸ್ ತಂಡ ಇಂದು ಆಯೋಜನೆ ಮಾಡಿದ ಪ್ರೆಸ್ ಮೀಟ್ನಲ್ಲಿ ಮುಂದಿನ ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್ ಮಾಡಿದೆ.