ಹಾಸನ: ಹೃದಯಾಘಾತದಿಂದ ಮತ್ತೋರ್ವ ಯುವಕ ಸಾವು..!
ಹಾಸನ: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಪ್ರಕರಣಗಳು ಆತಂಕ ಸೃಷ್ಟಿಸಿವೆ. ಇದರ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಇದರ ಬೆನ್ನಲ್ಲೇ ಹೃದಯಾಘಾತಕ್ಕೆ ಮತ್ತೋರ್ವ ಯುವಕ ಬಲಿಯಾಗಿರುವ ಘಟನೆ ಹಾಸನ ಹೊರವಲಯದ, ಚಿಕ್ಕಕೊಂಡಗುಳ ಗ್ರಾಮದಲ್ಲಿ ನಡೆದಿದೆ.
ಮದನ್ (21) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕನಾಗಿದ್ದು, ಮೂಲತಃ ಹಾಸನ ತಾಲ್ಲೂಕಿನ, ಚಿಟ್ನಳ್ಳಿ ಗ್ರಾಮದ ಮದನ್, ತಾಯಿ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದನು.
ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಗೆ ಬಂದಿದ್ದನು. ಮನೆಯಲ್ಲಿದ್ದ ವೇಳೆ ಮದನ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಸಾವು ಪ್ರಕರಣಗಳು 34ಕ್ಕೆ ಏರಿಕೆಯಾಗಿದೆ.