No menu items!
10.8 C
Munich
Wednesday, April 29, 2026

ಹೊಟ್ಟೆ ನೋವಿಗೆ ಜೀವನಶೈಲಿ ಎಂತಹುದಾಗಿರಬೇಕು? ಇಲ್ಲಿದೆ ಮಾಹಿತಿ

Must read

ಹೊಟ್ಟೆ ನೋವಿಗೆ ಜೀವನಶೈಲಿ ಎಂತಹುದಾಗಿರಬೇಕು? ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ ಹೊಟ್ಟೆ ನೋವು ಎನ್ನುವುದು ತಾತ್ಕಾಲಿಕ ಸಮಸ್ಯೆ ಅನ್ನೋ ಭ್ರಮೆ ಇದೆ. ಆದರೆ, ದಿನಚರ್ಯೆ ಸರಿಯಾಗಿಲ್ಲ ಅಂದ್ರೆ… ಈ ತಾತ್ಕಾಲಿಕ ನೋವು, ಶಾಶ್ವತ ಅನಾರೋಗ್ಯದ ದಿಕ್ಕಿಗೆ ಕರೆದೊಯ್ಯಬಹುದು. ಊಟದ ಸಮಯದಲ್ಲಿ ಅನಿಯಮ, ಹೆಚ್ಚಾಗಿ ಖಾರದ ತಿಂಡಿಗಳು, ಹಾಗೂ ಜೀವನಶೈಲಿಯ ಅಸಮತೋಲನ – ಇವೆಲ್ಲವೂ ಹೊಟ್ಟೆ ನೋವಿನ ಪ್ರಮುಖ ಕಾರಣಗಳಾಗಿವೆ.”
ಒಂದು ಗ್ಲಾಸ್ ಬಿಸಿ ನೀರಿನಿಂದ ದಿನದ ಆರಂಭ. ಸಮಯಕ್ಕೆ ತಿನಿಸು. ಜಂಕ್ ಫುಡ್, ಕೊಬ್ಬಿದ ಪದಾರ್ಥಗಳಿಗೆ ಟಾಟಾ ಹೇಳಿ. ಇಷ್ಟೆ ಅಲ್ಲ ತಿಂದು ತಕ್ಷಣ ಮಲಗುವುದನ್ನು ತ್ಯಜಸಿ
ಮಾನಸಿಕ ಒತ್ತಡವೂ ಹೊಟ್ಟೆಗೆ ಶತ್ರು!
ಸ್ನಾಯುಗಳಷ್ಟೆ ಅಲ್ಲ, ನಿಮ್ಮ ಹೊಟ್ಟೆಯೂ ಮಾನಸಿಕ ಒತ್ತಡದಿಂದ ಪ್ರಭಾವಿತವಾಗುತ್ತದೆ. ಕೆಲ ಸಮಯ ಧ್ಯಾನ, ಪ್ರಾಣಾಯಾಮ, ನಡಿಗೆ… ಇವು ಹೊಟ್ಟೆಯ ಆರೋಗ್ಯಕ್ಕೆ ದಾರಿ ತೋರಬಹುದು.
ಇಗೋ ತಜ್ಞರ ಸಲಹೆ:
ಹೊಟ್ಟೆ ನೋವು ಪದೇ ಪದೇ ಆಗ್ತಿದ್ರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ತೊಂದರೆ ಸುಲಭವಾಗಿ ನಿವಾರಣೆಯಾಗಬಹುದು, ಆದರೆ ನಿರ್ಲಕ್ಷ್ಯವಾಯಿತು ಅಂದ್ರೆ, ಅದು ಭಯಾನಕ ಸ್ಥಿತಿಗೆ ತಲುಪಬಹುದು.”
ಸಣ್ಣ ಬದಲಾವಣೆ, ದೊಡ್ಡ ಪರಿಹಾರ!
ಹೊಟ್ಟೆ ನೋವಿಗೆ ಔಷಧಿ ಒಂದೆ ದಾರಿ ಅಲ್ಲ. ಸರಿಯಾದ ಜೀವನಶೈಲಿ, ನಿಯಮಿತ ಆಹಾರಪಾನ ಮತ್ತು ಮನಸ್ಸಿನ ಸಮತೋಲನವೇ ನಿಜವಾದ ಪರಿಹಾರ. ನೀವು ತಿನ್ನೋದು, ನೀವೂ. ನಿನ್ನ health ನಿನ್ನ ಕೈಯಲ್ಲಿದೆ. ಹೊಟ್ಟೆ ನೋವಿಗೆ ಔಷಧಿ ಬೇಕಾದ್ರೆ – ಮೊದಲು ಜೀವನಶೈಲಿ ಬದಲಿಸಿ..

- Advertisement -spot_img

More articles

- Advertisement -spot_img

Latest article