ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ
ಜುಲೈ 9, 2025ರಂದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ದರವು ದೇಶದ ಬಹುತೇಕ ನಗರಗಳಲ್ಲಿ 10 ಗ್ರಾಂಗೆ ₹90,000ಕ್ಕೆ ತಲುಪಿದೆ. ಇತರ ಕ್ಯಾರಟ್ಗಳ ದರಗಳಲ್ಲಿಯೂ ಗಣನೀಯ ವ್ಯತ್ಯಾಸವಿದೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ₹98,180 ಆಗಿದ್ದು, 18 ಕ್ಯಾರಟ್ ಚಿನ್ನದ ದರ ₹73,640ಕ್ಕೆ ತಲುಪಿದೆ.ಬೆಳ್ಳಿಯ ದರಕ್ಕೂ ಏರಿಕೆಯ ಅಲೆ ತಟ್ಟಿದ್ದು, 10 ಗ್ರಾಂ ಬೆಳ್ಳಿ ₹1,100 ರೂಪಾಯಿ ಮತ್ತು 100 ಗ್ರಾಂ ₹11,100ಕ್ಕೆ ವ್ಯಾಪಾರವಾಗುತ್ತಿದೆ.
ಬೆಂಗಳೂರು ಸೇರಿದಂತೆ ಚೆನ್ನೈ, ಮುಂಬೈ, ಕೋಲ್ಕತ್ತಾ, ಕೇರಳ ಮತ್ತು ಭುವನೇಶ್ವರ್ಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ₹90,000 ಆಗಿದ್ದು, ದೆಹಲಿ, ಜೈಪುರ್ ಮತ್ತು ಲಕ್ನೋಗಳಲ್ಲಿ ಇದು ಸ್ವಲ್ಪ ಹೆಚ್ಚು – ₹90,150 ಇದೆ. ಅಹ್ಮದಾಬಾದ್ನಲ್ಲಿ ₹90,050 ದರ ನಿಗದಿಯಾಗಿದೆ.
ಇಂತಹ ಬೆಲೆಗಳಲ್ಲಿ ಬದಲಾವಣೆಗಳು ಜಾಗತಿಕ ಮಾರುಕಟ್ಟೆ ಪ್ರಭಾವ, ಮೌಲ್ಯಮಾಪನದ ಬದಲಾವಣೆಗಳು ಮತ್ತು ಹೂಡಿಕೆದಾರರ ಮನೋಭಾವವನ್ನು ಪರಿಗಣಿಸಿ ಆಗುತ್ತಿವೆ. ಹೀಗಾಗಿ ಚಿನ್ನ ಅಥವಾ ಬೆಳ್ಳಿ ಖರೀದಿಸುವ ಮೊದಲು, ಹಾಲ್ಮಾರ್ಕ್ ಪ್ರಮಾಣೀಕರಣ ಮತ್ತು ಸ್ಥಳೀಯ ಜ್ಯುವೆಲ್ಲರ್ರ ದರವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.