Gold Rate Today: ಮತ್ತೆ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ದರ ಎಷ್ಟಿದೆ?
ಬೆಂಗಳೂರು: ಫಳ ಫಳ ಹೊಳೆಯುವ ಚಿನ್ನ ಕಂಡರೆ ಯಾವ ಮಹಿಳೆಗೆ ಇಷ್ಟವಾಗದು ಹೇಳಿ, ಅದರ ಹೊಳಪಿನಂತೆ ಅದರ ದರವೂ ಸದಾ ಹೊಳೆಯುತ್ತಿರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಇತ್ತೀಚಿನ ಕೆಲ ದಿನಗಳಿಂದ ಅದರ ದರ ಸಾಕಷ್ಟು ಹೆಚ್ಚಾಗಿ ಹೊಳೆಯುತ್ತಿದೆ ಎನ್ನಬಹುದು. ಅಂದರೆ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ.
ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 9,988 ರೂಪಾಯಿ ಆಗಿದ್ದು, ಇಂದು 17 ರೂಪಾಯಿ ಏರಿಕೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ ಕೂಡಾ 15 ರೂಪಾಯಿ ಹೆಚ್ಚಳ ಆಗಿ, ಇಂದಿನ ಬೆಲೆ 9155 ರೂಪಾಯಿಗೆ ಏರಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 170 ರೂ ಹೆಚ್ಚಳ ಆಗಿದೆ. ಇಂದಿನ ಬೆಲೆ 99,880 ರೂ ಆಗಿದೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆ ಆಗಿ, ಇಂದಿನ ಬೆಲೆ 91,550 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 9,988 ರೂ ಇದೆ. ಬೆಳ್ಳಿಯ ಬೆಲೆ ಇಂದು ತಟಸ್ಥ ಆಗಿ, 115 ರೂ ಆಗಿದ್ದು , ಕೆಜಿ ಬೆಲೆ 1,15,000 ರೂ ಆಗಿದೆ.