ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಬಂದಿಳಿದ ಶುಭಾಂಶು ಶುಕ್ಲಾ
ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ. ಈ ಖುಷಿ ಕ್ಷಣವನ್ನು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದಾರೆ. ಬರೋಬ್ಬರಿ 18 ದಿನಗಳ ಯಶಸ್ವಿ ವಾಸ್ತವ್ಯದ ನಂತರ ಭೂಮಿಗೆ ಮರಳಿದ್ದಾರೆ.
ಜೂನ್ 25, 2025ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಿಸಿದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು ಇಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೊ ಕರಾವಳಿಗೆ ಬಂದು ಸೇಫ್ ಆಗಿ ಲ್ಯಾಂಡ್ ಆಗಿದ್ದಾರೆ. ಲ್ಯಾಂಡಿಂಗ್ ಬಳಿಕ ಪುನಶ್ಚೇತನ ಕಾರ್ಯಕ್ರಮ ಇದೆ.
ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುವಾಗುವಂತೆ 7 ದಿನಗಳ ಪುನಶ್ಚತನಕ್ಕೆ ಒಳಪಡಲಿದ್ದಾರೆ. ಒಟ್ಟಾರೆ ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತದ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆಗಸದಲ್ಲಿ ಶುಭಾರಂಭ ಅಂತರಿಕ್ಷ ಯಾನ ಅಂತ್ಯವಾಗಿದೆ. ಗಗನದಿಂದ ಭಾರತವನ್ನು ಸಾರೆ ಜಹಾಂಸೆ ಅಚ್ಛಾ ಅಂತ ಶುಕ್ಲಾ ಬಣ್ಣಿಸಿದ್ದರು.