ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ
ಬೆಂಗಳೂರು: ನಗರದಲ್ಲಿನ 40 ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ‘ಶಾಲೆಗಳ ಕ್ಲಾಸ್ರೂಮ್ಗಳಲ್ಲಿ ಮಕ್ಕಳ ಬ್ಯಾಗ್ಗಳಲ್ಲಿ ಸ್ಪೋಟಕ ವಸ್ತುಗಳನ್ನು ಇಡಲಾಗಿದೆ’ ಎಂಬ ಇಮೇಲ್ನಲ್ಲಿ ಬಂದಿದ್ದು, ಕೂಡಲೇ ಶಾಲೆಗಳ ಸಿಬ್ಬಂದಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬೆದರಿಕೆ ಸಂದೇಶದಲ್ಲಿ, ‘ಬ್ಲಾಕ್ ಕಲರ್ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಸ್ಪೋಟಕವಿದೆ’, ‘ನಾನು ಪ್ರಪಂಚದ ಪ್ರತಿಯೊಬ್ಬನನ್ನು ಹತ್ಯೆ ಮಾಡುತ್ತೇನೆ’ ಮತ್ತು ‘ಬಾಂಬ್ ಸ್ಪೋಟದ ನಂತರ ಮಕ್ಕಳು ಸಾಯುತ್ತಾರೆ, ಇನ್ನು ಕೆಲವರು ಅಂಗವಿಕಲರಾಗುತ್ತಾರೆ. ಇದನ್ನು ನೋಡಿ ನಾನು ಖುಷಿಪಡುತ್ತೇನೆ’ ಎಂಬಂತಹ ವಾಕ್ಯಗಳು ಇರುವುದಾಗಿ ವರದಿಯಾಗಿದೆ.
ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಶಂಕಾಸ್ಪದ ವಸ್ತುಗಳಿಗಾಗಿ ಶೋಧ ಕಾರ್ಯ ಹಮ್ಮಿಕೊಂಡಿದ್ದಾರೆ. ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಶಾಲೆಗಳನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದೆ.
ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ
Date: