ಮಧುಮೇಹಿಗಳಿಗೆ ರಕ್ತದ ಸಕ್ಕರೆ ನಿಯಂತ್ರಿಸಲು ಈ ಆಹಾರಗಳು ರಾಮಬಾಣ!
ಮಧುಮೇಹವು ಸರಿಯಾಗಿ ನಿಯಂತ್ರಣದಲ್ಲಿಲ್ಲದಿದ್ದರೆ, ಕಣ್ಣು, ಮೂತ್ರಪಿಂಡ ಹಾಗೂ ನರಗಳಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಟೈಪ್ 2 ಡಯಾಬಿಟೀಸ್ ಇರುವವರು ತಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಅವಶ್ಯಕ.
ತಜ್ಞರ ಪ್ರಕಾರ, ಆಹಾರದಲ್ಲಿ ಸರಿಯಾದ ಆಯ್ಕೆ ಮಾಡುವುದು ಮಾತ್ರವಲ್ಲದೆ, ವ್ಯಾಯಾಮ ಹಾಗೂ ಒತ್ತಡ ನಿರ್ವಹಣೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ನೈಸರ್ಗಿಕವಾಗಿ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುವ ಕೆಲವು ಆಹಾರಗಳಿವೆ. ಇಲ್ಲಿ ಎರಡು ಮುಖ್ಯವಾದವುಗಳ ಮಾಹಿತಿ:
ಕುಂಬಳಕಾಯಿ – ಡಯಾಬಿಟೀಸ್ ನ ನೈಸರ್ಗಿಕ ಶತ್ರು
ಕುಂಬಳಕಾಯಿ ಕಡಿಮೆ ಗ್ಲೈಸೆಮಿಕ್ ಸೂಚಿಯುಳ್ಳ ತರಕಾರಿ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯಕ. ಜೊತೆಗೆ ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸಿ, ರಕ್ತದ ಸಕ್ಕರೆ ತ್ವರಿತವಾಗಿ ಹೆಚ್ಚಾಗದಂತೆ ತಡೆಯುತ್ತದೆ. ಕುಂಬಳಕಾಯಿ ಜ್ಯೂಸ್ ಅಥವಾ ಪುಡಿ ರೂಪದಲ್ಲೂ ಬಳಸಬಹುದು ಎಂದು 2019ರ ಅಧ್ಯಯನ ತಿಳಿಸಿದೆ.
ಬ್ರೊಕೊಲಿ – ಹಸಿರು ಆರೋಗ್ಯ ಶಕ್ತಿ
ಬ್ರೊಕೊಲಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಲು ಮಹತ್ವಪೂರ್ಣ ಪಾತ್ರವಹಿಸುತ್ತಿದೆ. ಇದು “ಸಲ್ಫೊರಾಫೇನ್” ಎಂಬ ಶಕ್ತಿಶಾಲಿ ಅಂಶ ಹೊಂದಿದ್ದು, ಇನ್ಸುಲಿನ್ಗೆ ದೇಹದ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಬ್ರೊಕೊಲಿಯಲ್ಲಿ ಫೈಬರ್ ಹೆಚ್ಚು ಇರುವುದರಿಂದ, ಕಾರ್ಬೋಹೈಡ್ರೇಟ್ಗಳು ನಿಧಾನವಾಗಿ ರಕ್ತದಲ್ಲಿ ಹೀರಿಕೊಳ್ಳುತ್ತವೆ. ಇದು ರಕ್ತದ ಸಕ್ಕರೆ ಏರಿಕೆ ಆಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಈ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ, ಮಧುಮೇಹ ನಿಯಂತ್ರಣ ಸುಲಭವಾಗಬಹುದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.