ಬಿಕ್ಲು ಶಿವ ಹತ್ಯೆ ಪ್ರಕರಣ: ಇಂದು ವಿಚಾರಣೆಗೆ ಹಾಜರಾಗಲು ಬೈರತಿ ಬಸವರಾಜ್’ಗೆ ಸೂಚನೆ
ಬೆಂಗಳೂರು: ಬಿಕ್ಲು ಶಿವ ಅಲಿಯಾಸ್ ರೌಡಿಶೀಟರ್ ಶಿವಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ರಾಜಕೀಯ ತಿರುವು ಕಂಡುಬಂದಿದ್ದು, ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಶಾಸಕರು ಸಲ್ಲಿಸಿದ್ದ ಎಫ್ಐಆರ್ ರದ್ದತಿ ಹಾಗೂ ನೋಟಿಸ್ ರದ್ದುಪಡಿಸುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅವರು ವಿಚಾರಣೆಗೆ ಹಾಜರಾಗಬೇಕೆಂದು ಸ್ಪಷ್ಟ ಆದೇಶ ನೀಡಿದೆ.
ಈ ಕುರಿತಂತೆ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ಪೀಠ, ಶಾಸಕರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿ, ತನಿಖಾ ಅಧಿಕಾರಿಗಳಿಗೆ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಸೆಕ್ಷನ್ 35(3) ಅಡಿಯಲ್ಲಿ ನೋಟಿಸ್ ಜಾರಿಗೆ ಸಂಪೂರ್ಣ ಅವಕಾಶ ನೀಡಿದೆ.
ಪೊಲೀಸರ ದಿಢೀರ್ ತಯಾರಿ
ಹೈಕೋರ್ಟ್ನ ಈ ನಿರ್ಣಯದ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಬಿಗಿ ಭದ್ರತೆ ಹಾಗೂ ಕ್ರಮಗಳ ಬಗ್ಗೆ ಸಮಾಲೋಚನೆ ನಡೆದಿದೆ. ಇದೀಗ ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್ ಅವರು ಇಂದು ಬೆಳಗ್ಗೆ 11:30ಕ್ಕೆ ಕೆಜಿಹಳ್ಳಿ ಎಸಿಪಿ ಪ್ರಕಾಶ್ ರಾಥೋಡ್ ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ.
ಬಿಕ್ಲು ಶಿವ ಹತ್ಯೆ ಪ್ರಕರಣ: ಇಂದು ವಿಚಾರಣೆಗೆ ಹಾಜರಾಗಲು ಬೈರತಿ ಬಸವರಾಜ್’ಗೆ ಸೂಚನೆ
Date: