ಸಾಲ ಕೊಡಿಸುವುದಾಗಿ ಕೋಟ್ಯಂತರ ರೂ ವಂಚನೆ: ಉದ್ಯಮಿಗಳೇ ಈತನ ಟಾರ್ಗೆಟ್..!
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರೋಷನ್ ಸಲ್ಡಾನಾ ವಿರುದ್ಧ ಮಂಗಳೂರು ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ವಿಚಾರಣೆ ವೇಳೆ ಹಲವು ಅಂಶಗಳು ಬೆಳಕಿಗೆ ಬರುವುದರ ಜೊತೆಗೆ, ಪೊಲೀಸರು ಈತನ ವಂಚನೆಯ ಮಾಯಾಜಾಲವನ್ನು ಭೇದಿಸುತ್ತಿದ್ದಾರೆ. ರೋಷನ್ ಸಲ್ಡಾನಾ ಭಾರತದ ವಿವಿಧ ರಾಜ್ಯಗಳ ಉದ್ಯಮಿಗಳನ್ನು ಲಕ್ಷಾಂತರ ರೂಪಾಯಿಗೆ ವಂಚಿಸಿದ್ದಾನೆ. ವಿಚಾರಣೆ ವೇಳೆ ಆತನ ಬಾಯಿಂದಲೇ ಸ್ಫೋಟಕ ಮಾಹಿತಿ ಹೊರಬಿದ್ದಿವೆ.
ವಂಚನೆಗೆ ಒಳಗಾದ ಉದ್ಯಮಿಗಳು
• ಮಹಾರಾಷ್ಟ್ರದ ಉದ್ಯಮಿಗೆ ₹5 ಕೋಟಿ ರೂಪಾಯಿ ವಂಚನೆ
• ಮತ್ತೊಬ್ಬ ಮಹಾರಾಷ್ಟ್ರದ ಉದ್ಯಮಿಗೆ ₹10 ಕೋಟಿ
• ಅಸ್ಸಾಂನ ಉದ್ಯಮಿಗೆ ₹20 ಲಕ್ಷ ರೂಪಾಯಿ ವಂಚನೆ
ಈ ವಂಚಿತ ಉದ್ಯಮಿಗಳು ಈಗ ಮಂಗಳೂರಿನ ಸಿಐಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಮತ್ತಷ್ಟು ಗಂಭೀರತೆಯನ್ನು ಹೊಂದಿದೆ.
ಹಣ ಪ್ರೀಜ್ ಮಾಡಿಸಿದ ಪೊಲೀಸ್ ಇಲಾಖೆ
• ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ₹3.5 ಕೋಟಿ,
• ಅಸ್ಸಾಂನ ಉದ್ಯಮಿಗೆ ಸಂಬಂಧಿಸಿದ ₹20 ಲಕ್ಷ ಹಣವನ್ನು ಫ್ರೀಜ್ ಮಾಡಿಸಿದ್ದಾರೆ.
ಲಕ್ಸುರಿ ಜೀವನಶೈಲಿ – ವಜ್ರದ ಉಂಗುರ ವಶ
ವಂಚನೆದಿಂದ ಸಂಪಾದಿಸಿದ್ದ ಹಣವನ್ನು ಆರೋಪಿ ಬಡವರ ಹಿತಕ್ಕಾಗಿ ಬಳಸಿದ್ದೆ ಎನ್ನುವುದು ದೂರದ ಕನಸು. ತನಿಖೆಯಲ್ಲಿ ಬಂದ ಮಾಹಿತಿಯಂತೆ, ರೋಷನ್ ಸಲ್ಡಾನಾ ₹2.75 ಕೋಟಿಗಳ ಮೌಲ್ಯದ ವಜ್ರದ ಉಂಗುರ ಧರಿಸಿದ್ದ. ಮಂಗಳೂರು ಪೊಲೀಸರು ಈ ವಜ್ರದ ಉಂಗುರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.