ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ
ಬೆಂಗಳೂರು: ಚಿನ್ನದ ಬೆಲೆ ದಿನ ದಿನೇ ಏರಿಕೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನ ಅನ್ನೋದು ಬೆಲೆ ಬಾಳುವ ವಸ್ತುವಾಗಿದ್ದು, ಹೂಡಿಕೆಗೂ ಅತ್ಯಮೂಲ್ಯವಾಗಿದೆ. ಈ ವರ್ಷ ಚಿನ್ನ ಮಾಡಿಸಿ ಮುಂದಿನ ವರ್ಷ ಅದನ್ನು ಮಾರಿದರೂ ಒಳ್ಳೆ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೂ ಇದನ್ನು ಖರೀದಿಸುವವರ ಸಂಖ್ಯೆಹೆಚ್ಚಾಗಿದೆ.
ಇನ್ನು ಬೆಲೆ ಏರಿಕೆ ನೋಡೋದಾದರೆ, ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರ ಬೇಡಿಕೆಯ ಹಿನ್ನೆಲೆಯಲ್ಲಿ ಬಂಗಾರದ ದರ ಏರುತ್ತಿದೆ. ಜೊತೆಗೆ ಇತರೆ ವಿದ್ಯಮಾನಗಳು ಕೂಡ ಬೆಲೆ ಏರಿಕೆಗೆ ಕಾರಣವಾಗಿವೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ? ನೋಡೋಣ ಬನ್ನಿ.
ಚಿನ್ನದ ಬೆಲೆ ಇವತ್ತು ಏರಿಕೆಯಾದರೆ, ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್ ಚಿನ್ನದ ಬೆಲೆ 9,170 ರೂನಿಂದ 9,180 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 10,015 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು ಹಾಗೂ ಇತರ ಕೆಲವೆಡೆ 116 ರೂ ಇದ್ದರೆ,
ಚೆನ್ನೈ ಇತ್ಯಾದಿ ಕಡೆ 126 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 91,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 91,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,600 ರುಪಾಯಿಯಲ್ಲಿ ಇದೆ.