ಚಿತ್ತಾಪುರದಲ್ಲಿ ಜೂಜಾಟ: ರಾಜಕೀಯ ಮುಖಂಡರು ಸೇರಿ 7 ಮಂದಿ ಅರೆಸ್ಟ್!
ಕಲಬುರ್ಗಿ:- ಜಂಜಾಟದಲ್ಲಿ ತೊಡಗಿದ್ದ ರಾಜಕೀಯ ಮುಖಂಡರು ಸೇರಿ 7 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಚಿತ್ತಾಪುರ ಪಟ್ಟಣದಲ್ಲಿ ಜರುಗಿದೆ
ಶಿವರುದ್ರಪ್ಪ, ಜಗನಗೌಡ (ಕಾಂಗ್ರೆಸ್ ಮುಖಂಡ), ಶರಣಗೌಡ ( ಬಿಜೆಪಿ ಮುಖಂಡ), ಸೇರಿ ಏಳು ಮಂದಿ ಬಂಧಿತರು. ಪಟ್ಟಣದ ಕಲ್ಯಾಣ ಮಂಟಪದ ಹಿಂಬದಿಯಲ್ಲಿ ಬಂಧಿತರು ಜೂಜಾಡುತ್ತಿದ್ದರು. ಈ ವೇಳೆ, ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ 59,220 ರೂ ಹಣ ಸೇರಿದಂತೆ ಇತರ ವಸ್ತುಗಳ ಜಪ್ತಿ ಜಪ್ತಿ ಮಾಡಲಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.