ಒಂದು ಕಪ್ ಬ್ಲೂ ಟೀ ಆರೋಗ್ಯಕ್ಕೂ, ರುಚಿಗೂ ಒಳ್ಳೆಯದು: ಇಲ್ಲಿದೆ ಪ್ರಯೋಜನಗಳು!
ಶಂಖಪುಷ್ಪ” ಈ ಹೆಸರನ್ನು ಕೇಳಿದ ಕೂಡಲೇ ನಮಗೆ ದೇವರ ಪೂಜೆಯ ಹೂವು ನೆನಪಾಗುತ್ತದೆ. ಆದರೆ ನಾನಾ ಔಷಧೀಯ ಗುಣಗಳಿಂದ ತುಂಬಿರೋ ಈ ಹೂವಿನಿಂದ ಈಗ “ಬ್ಲೂ ಟೀ” ಎಂಬ ನವ ಟ್ರೆಂಡ್ ಹುಟ್ಟಿಕೊಂಡಿದೆ! ಹೌದು, ಇತ್ತೀಚೆಗೆ ಸಾಕಷ್ಟು ಮಂದಿ ತಮ್ಮ ದೈನಂದಿನ ಜೀವನದಲ್ಲಿ ಗ್ರೀನ್ ಟೀ ಬದಲು ಬ್ಲೂ ಟೀ ಆಯ್ಕೆ ಮಾಡ್ತಿದ್ದಾರೆ. ಪ್ರೀತಿ ಬಣ್ಣದಂತಿರುವ ಈ ಚಹಾ ಕೇವಲ ಆಕರ್ಷಕವಲ್ಲ, ಆರೋಗ್ಯದ ಮೆಚ್ಚಿನ ಸ್ನೇಹಿತವೂ ಹೌದು!
ಬ್ಲೂ ಟೀ ಪಾನದಿಂದ ಸಿಗುವ ಲಾಭಗಳು:
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಬ್ಲೂ ಟೀ ಕುಡಿದರೆ, ಜೀರ್ಣಕ್ರಿಯೆ ಶುದ್ಧವಾಗುತ್ತೆ. ಅಜೀರ್ಣ, ಆಮ್ಲೀಯತೆ, ಮಲಬದ್ಧತೆ..? ಇಲ್ಲವೇ ತೊಂದರೆ! ಜೊತೆಗೆ ದೇಹದಲ್ಲಿನ ಟಾಕ್ಸಿನ್‌ಗಳೂ ಹೊರ ಹೋಗುತ್ತವೆ.
ಬ್ಲೂ ಟೀನಲ್ಲಿ ಕ್ಯಾಲೊರೀಸ್, ಕೊಬ್ಬು, ಕೆಫೀನ್ ಯಾವುದೂ ಇಲ್ಲ. ಹೀಗಾಗಿ ಇದು ಹಸಿವನ್ನು ನಿಶಬ್ದವಾಗಿ ಕಂಟ್ರೋಲ್ ಮಾಡುತ್ತದೆ. ತೂಕ ಇಳಿಕೆಗೆ ನೈಸರ್ಗಿಕ ಸಹಾಯ.
ಈ ನೀಲಿ ಚಹಾದಲ್ಲಿ ಬಯೋಫ್ಲವೊನೈಡ್ಸ್, ಆಂಟಿ-ಆಕ್ಸಿಡೆಂಟ್ಸ್, ಇನ್ಸುಲಿನ್ ಬೂಸ್ಟರ್ ಎಲ್ಲವಿದೆ. ಇದರಿಂದ ಮೆದುಳಿನ ಕ್ರಿಯಾಶೀಲತೆ ಹೆಚ್ಚಾಗುತ್ತದೆ, ಸಕ್ಕರೆ ಮಟ್ಟ ಕೂಡ ಸಮತೋಲನದಲ್ಲಿರುತ್ತದೆ. ಆಲ್ಝೈಮರ್, ಉನ್ನತ ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಇದು ಪರಿಹಾರವಂತೆ
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಸಂಜೆ 4-5 ಗಂಟೆ ಸಮಯದಲ್ಲಾದರೆ ಇನ್ನೂ ಉತ್ತಮ.