ನಟ ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ!
ನಟಿ ರಮ್ಯಾ, ರಾಜಕೀಯಕ್ಕೆ ಹೋಗಿ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಮಹಿಳಾ ಪರ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರೇಣುಕಾ ಸ್ವಾಮಿ ಪ್ರಕರಣ ನಡೆದಾಗಲೂ ಸಹ ನಟಿ ರಮ್ಯಾ, ರೇಣುಕಾ ಸ್ವಾಮಿ ಪರವಾಗಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದರು.
ಅದಕ್ಕೆ ಪ್ರತಿಯಾಗಿ ರಮ್ಯಾ ಸಹ ದರ್ಶನ್ ಅಭಿಮಾನಿಗಳ ದುರ್ವರ್ತನೆಯನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ನಿನ್ನೆ ನಟಿ ರಮ್ಯಾ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್ಗಳೇ ಸಾಕ್ಷಿ ಎಂದು ಪೋಸ್ಟ್ ಹಾಕಿದ್ದರು. ಇದೀಗ ನಟಿ ರಮ್ಯಾ ಅವರು ಕೆಟ್ಟ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದ ಕೆಲವು ಪ್ರೊಫೈಲ್ಗಳಿಂದ ಬಂದ ಮೆಸೇಜ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದೀಗ ನಟಿ ರಮ್ಯಾ ಮತ್ತೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಫ್ಯಾನ್ಸ್ ಮೆಸೇಜ್ಗೂ, ಸ್ವಾಮಿ ಮೆಸೇಜ್ಗೂ ವ್ಯತ್ಯಾಸವಿಲ್ಲ. ಇಂಥಾ ಟ್ರೋಲ್ಗಳಿಂದಲೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೀತಿರೋದು. ಈ ಮೈಂಡ್ ಸೆಟ್ನಿಂದಲೇ ರೇ*ಪ್ ಮತ್ತು ಮ*ರ್ಡರ್ ಆಗ್ತಿರೋದು ಎಂದಿದ್ದಾರೆ. ಇದರ ಜೊತೆಗೆ ನಟಿ ರಮ್ಯಾ ಅವರಿಗೆ ಬಂದ ಮೆಸೇಜ್ಗಳ ಸ್ಕ್ರೀನ್ ಶಾಟ್ಸ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲಾ ಈ ಕಾಮೆಂಟ್ಸ್ಗಳೇ ಸಾಕ್ಷಿ ಎಂದಿದ್ದಾರೆ.
ನಟ ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ!
Date: