ಯುವಕ ಆತ್ಮಹತ್ಯೆ: ಬಾಟಲ್ ನಿಂದ ಕತ್ತು ಕೊಯ್ದುಕೊಂಡು ಸಾವು.!
ಬೆಂಗಳೂರು: ಚಿಕ್ಕಗೊಲ್ಲರ ಹಟ್ಟಿಯ ಅಭಿನಯ ಸ್ಕೂಲ್ ರಸ್ತೆಯಲ್ಲಿ ಇಂದು ಮುಂಜಾನೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸುಂಕದಕಟ್ಟೆ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ.
ನವೀನ್ ತನ್ನ ಶರ್ಟ್ನ ಸಹಾಯದಿಂದ ಜೆನ್ ಸೆಟ್ ಲಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಈ ವೇಳೆ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿದ್ದು, ಆತ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.