ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್! ಯೆಮೆನ್ ದೇಶ ವಿಧಿಸಿದ್ದ ಗಲ್ಲುಶಿಕ್ಷೆ ರದ್ದು

Date:

ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್! ಯೆಮೆನ್ ದೇಶ ವಿಧಿಸಿದ್ದ ಗಲ್ಲುಶಿಕ್ಷೆ ರದ್ದು

 

ಯೆಮೆನ್ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ಪ್ರಕರಣ ತಿರುವು ಪಡೆದುಕೊಂಡಿದೆ. ಉದ್ಯೋಗಕ್ಕೆಂದು ಯೆಮನ್ಗೆ ಹೋಗಿದ್ದ ಕೇರಳದ ನರ್ಸ್ ನಿಮಿಷಾ ಪ್ರಿಯಾ ತನ್ನ ಪಾರ್ಟನರ್ ಕೊಲೆ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರು.

ಆದರೆ, ಭಾರತ ಹಾಗೂ ಹಲವು ಧಾರ್ಮಿಕ ಮುಖಂಡರ ಮಧ್ಯಪ್ರವೇಶದ ಬಳಿಕ ಕೊನೆಗೂ ನಿಮಿಷಾಳಿಗೆ ಗಲ್ಲು ಶಿಕ್ಷೆಯಿಂದ ಮುಕ್ತಿ ಸಿಕ್ಕಿದೆ. ಯೆಮನ್ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 16ರಂದು ನಿಮಿಷಾ ಪ್ರಿಯಾಳಿಗೆ ನೇಣಿಗೇರಿಸಲು ದಿನ ನಿಗದಿಯಾಗಿತ್ತು. ಆದರೆ, ಭಾರತ ಸರ್ಕಾರದ ಮನವಿ ಹಾಗೂ ಧಾರ್ಮಿಕ ಮುಖಂಡರ ಮಧ್ಯಸ್ಥಿಕೆಯ ಬಳಿಕ ಆ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿತ್ತು.

ಭಾರತ ಸರ್ಕಾರ ಮತ್ತು ಗ್ರ್ಯಾಂಡ್ ಮುಫ್ತಿ ಅಬು ಬಕರ್ ಅಹ್ಮದ್ ಸೇರಿದಂತೆ ಹಲವಾರು ಧಾರ್ಮಿಕ ಮುಖಂಡರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಯೆಮನ್ನ ಹೌತಿ ಅಧಿಕಾರಿಗಳು ಈ ಹಿಂದೆ ಗಲ್ಲು ಶಿಕ್ಷೆಯನ್ನು ಅಮಾನತುಗೊಳಿಸಿದ್ದರು. ಈಗ ಅದನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರಿಂದಾಗಿ ನಿಮಿಷಾ ಅವರಿಗೆ ಮರುಜೀವ ಸಿಕ್ಕಿದೆ.

Share post:

Subscribe

spot_imgspot_img

Popular

More like this
Related

ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಬಂದ ASI ಹೃದಯಾಘಾತದಿಂದ ನಿಧನ

ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಬಂದ ASI ಹೃದಯಾಘಾತದಿಂದ ನಿಧನ ಚಾಮರಾಜನಗರ: ರಾತ್ರಿ...

ಖಾಸಗಿ ಬಸ್ ಎಂಜಿನ್‌́ನಲ್ಲಿ ಹೊಗೆ: ತಪ್ಪಿದ ಭಾರೀ ಅನಾಹುತ

ಖಾಸಗಿ ಬಸ್ ಎಂಜಿನ್‌́ನಲ್ಲಿ ಹೊಗೆ: ತಪ್ಪಿದ ಭಾರೀ ಅನಾಹುತ ಬಾಗಲಕೋಟೆ: ಬೆಂಗಳೂರಿನಿಂದ ರಾಜಸ್ಥಾನದ...

ಚಳಿಗಾಲದಲ್ಲಿ ಥೈರಾಯ್ಡ್ ರೋಗಿಗಳು ಆಹಾರದ ಬಗ್ಗೆ ಹೆಚ್ಚು ಜಾಗ್ರತೆ !

ಚಳಿಗಾಲದಲ್ಲಿ ಥೈರಾಯ್ಡ್ ರೋಗಿಗಳು ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕುಚಳಿಗಾಲ ಆರಂಭವಾಗುತ್ತಿದ್ದಂತೆ...

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...