ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಮತ್ತೆ ಮುಂದೂಡಿಕೆ
ಬೆಂಗಳೂರು: ಕೆ.ಆರ್.ನಗರದಲ್ಲಿ ಕೆಲಸದಾಕೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 1ರಂದು ತೀರ್ಪು ಪ್ರಕಟಿಸುವುದಾಗಿ ಪ್ರಕಟಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಮೇಲೆ ಅತ್ಯಾಚಾರ ಮತ್ತು ವಿಡಿಯೋ ದಾಖಲಿಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ.
ಇಂದಿನ ನ್ಯಾಯಾಲಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಗಜಾನನ ಭಟ್ ಅವರು, ಸರ್ಕಾರಿ ವಕೀಲ ಎನ್. ಜಗದೀಶ್, ಸಹ ವಕೀಲ ಅಶೋಕ್ ನಾಯಕ್ ಹಾಗೂ ಆರೋಪಿತನ ಪರ ವಕೀಲ ಅರುಣ್ ಜಿ ಅವರಿಂದ ಮೊಬೈಲ್ ಸಾಕ್ಷ್ಯ ಮತ್ತು ತಾಂತ್ರಿಕ ಮಾಹಿತಿಗಳ ಕುರಿತು ವಿವರಗಳನ್ನು ಕೇಳಿದರು.
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಗೂಗಲ್ ಮ್ಯಾಪ್ ಆಧಾರಿತ ಸ್ಥಳಮಾಹಿತಿ ಬಗ್ಗೆ ನ್ಯಾಯಾಧೀಶರು ಸ್ಪಷ್ಟನೆ ಬೇಕೆಂದು ಸೂಚಿಸಿದರು. ಸರ್ಕಾರಿ ವಕೀಲರು, ಘಟನೆಯು ನಡೆದ ಮನೆ, ಶೆಡ್, ಮತ್ತು ಸುತ್ತಲಿನ ಸ್ಥಳಗಳ ನಕ್ಷೆಗಳನ್ನು ಗೂಗಲ್ ಮ್ಯಾಪ್ನ ಮೂಲಕ ಮಹಜರಿನಲ್ಲಿ ಬಳಸಲಾಗಿದೆಯೆಂದು ತಿಳಿಸಿದರು.
ಇಂದಿನ ವಿಚಾರಣೆಗೆ ಪ್ರಜ್ವಲ್ ರೇವಣ್ಣ ನ್ಯಾಯಾಲಯಕ್ಕೆ ಹಾಜರಿದ್ದರು. ನ್ಯಾಯಾಲಯವು ಸರ್ಕಾರಿ ವಕೀಲರಿಗೆ ಇಂದೇ ಮಧ್ಯಾಹ್ನದೊಳಗೆ ಸಂಪೂರ್ಣ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದು, ಪ್ರಕರಣದ ತೀರ್ಪು ಆಗಸ್ಟ್ 1ರಂದು ಪ್ರಕಟವಾಗಲಿದೆ.
ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಮತ್ತೆ ಮುಂದೂಡಿಕೆ
Date: