ಚಿನ್ನದ ದರ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!

Date:

ಚಿನ್ನದ ದರ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಹಳದಿ ಲೋಹದ ದರ ಪಟ್ಟಿ ಇಂತಿದೆ!

 

 

ನಮ್ಮಲ್ಲಿ ಬಂಗಾರ ಅಂದರೆ ಮುಗಿಯಿತು, ಅದರ ಮೇಲೆ ಒಂದು ರೀತಿಯ ಮುಗಿಯದ ಮೋಹ. ಇದನ್ನು ಸಂಪತ್ತಾಗಿ, ಆಭರಣವಾಗಿ, ಸ್ಟೇಟಸ್‌ ಆಗಿ, ಉಳಿತಾಯವಾಗಿ ನೋಡುತ್ತಾರೆ. ಇದರ ಬೇಡಿಕೆ ಬಂಗಾರದ ಬೆಲೆಯನ್ನು ಗಗನಕ್ಕೇರಿಸಿದೆ.ಭಾರತದಲ್ಲಿ ಶುಭ ಸಮಾರಂಭಗಳಲ್ಲಿ ಸ್ವರ್ಣಾಭರಣದ ಕಳೆಯಿಲ್ಲದಿದ್ದರೆ ಎಲ್ಲವೂ ಸಪ್ಪೆ.

ದರ ಎಷ್ಟೇ ಇದ್ದರೂ ಬಂಗಾರ ಕೊಳ್ಳೋದನ್ನು ಯಾರೂ ನಿಲ್ಲಿಸಲ್ಲ. ಅಷ್ಟರ ಮಟ್ಟಿಗೆ ಡಿಮ್ಯಾಂಡ್‌ ಇದೆ ಬಂಗಾರಕ್ಕೆ. ಕಷ್ಟ ಕಾಲದಲ್ಲಿ ನೆರವಿಗೆ ಬರುವ ಬಂಗಾರದ ಬೆಲೆ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಬಂಗಾರ ಏರಿಕೆ ಕಾಣಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಾರಣಗಳಿವೆ. ಇನ್ನೂ ಇಂದು ನಿರಂತರವಾಗಿ ಹೆಚ್ಚಳವಾಗಿದ್ದ ಚಿನ್ನದ ದರದಲ್ಲಿ ದಿಢೀರ್ 760 ರೂಪಾಯಿ ಇಳಿಕೆ ಆಗಿದೆ.

ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,228 ರೂಪಾಯಿ ಆಗಿದ್ದು,ಇಂದು 76 ರುಪಾಯಿ ಕಡಿಮೆ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 70 ರೂಪಾಯಿ ಇಳಿಕೆ ಆಗಿದ್ದು, 9,375 ರುಪಾಯಿ ಆಗಿದೆ.24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 760 ರೂ ಇಳಿಕೆ ಆಗಿ, 1,02,280 ರುಪಾಯಿಗೆ ಕಡಿಮೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 700 ರೂ ಕಡಿಮೆ ಆಗಿ 93,750 ರೂ ಆಗಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,228 ರೂ ಇದೆ. ಬೆಳ್ಳಿಯ ಬೆಲೆ ತಟಸ್ಥವಾಗಿದ್ದು 1,17,000 ರೂ ಆಗಿದೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...