ಬೆಂಗಳೂರು : ಬಹು ನಿರೀಕ್ಷಿತ ಟಿಎನ್ಐಟಿ ಸೌತ್ ಇಂಡಿಯನ್ ಮೀಡಿಯಾ ಪ್ರಶಸ್ತಿ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ.
ಇದೇ ಆಗಸ್ಟ್ 23 ರಂದು ಬೆಂಗಳೂರಿನ ಅರಮನೆ ಮೈದಾನ ಶೃಂಗಾರ ಪ್ಯಾಲೇಸ್ ಗಾರ್ಡನ್‌ನಲ್ಲಿ ನಡೆಯಲಿದೆ. ಕಳೆದ 7 ವರ್ಷಗಳಿಂದ ಕನ್ನಡ ಭಾಷೆಯ ಮಾಧ್ಯಮದ ಸಾಧಕರಿಗೆ ಟಿಎನ್‌ಐಟಿ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು ಆದರೆ ಕಳೆದ ವರ್ಷದಿಂದ ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗು ಮಲೆಯಾಳಂ ಭಾಷೆಯ ಸುದ್ದಿ ವಾಹಿನಿಗಳ ಸಾಧಕರಿಗೆ ಪ್ರಶಸ್ತಿ ನೀಡಿ ಅವರಿಗೆ ಗೌರವಿಸಲಾಗಿದೆ.
ನಟ ಹಾಗು ಟಿಎನ್‌ಐಟಿ ಸಂಸ್ಥೆಯ ಸಿಇಒ ರಘು ಭಟ್ ಅವರು ಮಾಧ್ಯಮದಲ್ಲಿ ಕೆಲಸ ಮಾಡುವ ಕೆಲ ಉದ್ಯೋಗಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಉದ್ದೇಶವಾಗಿದೆ.ಟಿಎನ್‌ಐಟಿ ಏಕೈಕ ಸಂಸ್ಥೆ ಇಷ್ಟು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರಧಾನ ಮಾಡುತ್ತಿದೆ ಎಂಬ ಹೆಗ್ಗಳಿಕೆ ಪಡೆದಿದೆ.
ಕಳೆದ ವರ್ಷದಂತೆ ಈ ವರ್ಷವೂ ಕೂಡ ದಕ್ಷಿಣ ಭಾರತದ ಎಲ್ಲಾ ಸುದ್ದಿ ವಾಹಿನಿಗಳಿಗೆ ಟಿಎನ್‌ಐಟಿ ಸಂಸ್ಥೆ ಆಹ್ವಾನ ನೀಡಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಗುಣ, ಮುಖ್ಯ ಸಂಪಾದಕರಾದ ಮೀರಾ ಪ್ರಸಾದ್, ಮೇಲ್ವಿಚಾರಕಿ ಮಧುಕಾಂತಿ ಹಾಗು ಮಾರ್ಕೆಟಿಂಗ್ ಮುಖ್ಯಸ್ಥೆ ಖುಷಿ ಅವರು ನಾಲ್ಕು ರಾಜ್ಯಗಳ ಸುದ್ದಿ ವಾಹಿನಿಗಳಿಗೆ ತೆರಳಿ ಟಿಎನ್‌ಐಟಿ ಸಂಸ್ಥೆಯ ಉದ್ದೇಶವನ್ನು ತಿಳಿಸಿದ್ದು, ಎಲ್ಲಾ ಸುದ್ದಿವಾಹಿನಿಗಳ ಮುಖ್ಯಸ್ಥರಿಂದ ಪ್ರಶಂಸೆ ಪಡೆದಿದ್ದಾರೆ.