*ಟಿಎನ್‌ಐಟಿ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ ಜರ್ಸಿ ಬಿಡುಗಡೆ*
ಬೆಂಗಳೂರು: ಬಹು ನಿರೀಕ್ಷಿತ ಟಿಎನ್‌ಐಟಿ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ 2025ರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಆಗಸ್ಟ್ 23ಕ್ಕೆ ಬೆಂಗಳೂರಿನ ಶೃಂಗಾರ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಹಲವು ಗಣ್ಯರು, ಸಿನಿಮಾ ನಟರು, ಸಾಧಕರು ಭಾಗಿಯಾಗಲಿದ್ದಾರೆ.
ಟಿಎನ್‌ಐಟಿ ಸಂಸ್ಥೆಯ ಅಧಿಕೃತ ಜರ್ಸಿಯನ್ನು ಉದ್ಯಮಿ ಹಾಗು ಎವಿಆರ್ ಗ್ರೂಪ್ಸ್ ಮಾಲೀಕರಾದ ಅರವಿಂದ್ ವೆಂಕಟೇಶ ರೆಡ್ಡಿ ಹಾಗು ಅವರ ತಾಯಿ ಭಾಗ್ಯಲಕ್ಷ್ಮೀ ವೆಂಕಟೇಶ್ ರೆಡ್ಡಿ ಅವರು ಬಿಡುಗಡೆ ಮಾಡಿದರು.
ಜರ್ಸಿ ಬಿಡುಗಡೆ ಬಳಿಕ ಮಾತನಾಡಿದ ಟಿಎನ್‌ಐಟಿ ಸಂಸ್ಥೆಯ ಸಿಇಒ ರಘು ಭಟ್ವ ಅವರು, ಕೇವಲ ಒಂದು ಪ್ರಶಸ್ತಿ ಸಮಾರಂಭವಾಗಿರದೆ, ಮಾಧ್ಯಮ ಕ್ಷೇತ್ರಕ್ಕೆ ಒಂದು ಹೊಸ ದಿಕ್ಕನ್ನು ನೀಡುವ ವೇದಿಕೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಟಿಎನ್‌ಐಟಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಸುಗುಣ ರಘು ಭಟ್, ಯೋಜನಾ ಮುಖ್ಯಸ್ಥರಾದ ಮಧುಕಾಂತಿ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.