ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಅರೆಸ್ಟ್ – SIT ತನಿಖೆ ಚುರುಕು
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT) ಮಹತ್ವದ ಕ್ರಮ ಕೈಗೊಂಡಿದೆ.
ಮುಸುಕು ಧರಿಸಿ “ನಾನೇ ಹೆಣಗಳನ್ನು ಹೂತಿಟ್ಟಿದ್ದೇನೆ” ಎಂದು ಹೇಳಿಕೆ ನೀಡಿದ್ದ ಅನಾಮಿಕ ವ್ಯಕ್ತಿಯನ್ನು SIT ಅಧಿಕಾರಿಗಳು ಬಂಧಿಸಿದ್ದಾರೆ. ಸತತ ವಿಚಾರಣೆ ನಡೆಸಿದ ನಂತರ, ಈತನನ್ನು ಅಧಿಕೃತವಾಗಿ ಅರೆಸ್ಟ್ ಮಾಡಲಾಗಿದೆ.
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಮುಖ ಸಾಕ್ಷಿದಾರ ಎಂದು ಹೇಳಿಕೊಂಡಿದ್ದ ಮುಸುಕುಧಾರಿಯನ್ನೇ ಬಂಧಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
SIT ತಂಡ ಈಗ ಪ್ರಕರಣದ ತನಿಖೆಯನ್ನು ಇನ್ನಷ್ಟು ವೇಗಗೊಳಿಸಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆ ವ್ಯಕ್ತವಾಗಿದೆ.