ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರದಲ್ಲಿ ಮತ್ತೆ ಭಾರೀ ಇಳಿಕೆ!
ಚಿನ್ನದ ದರ ಹೇಗೆ ಇರಲಿ, ಎಷ್ಟೇ ಇರಲಿ ಚಿನ್ನ ಖರೀದಿಸಬೇಕು ಎಂದಾಗ ಕೊಳ್ಳುಗರು ನಾ ಮುಂದು ತಾ ಮುಂದು ಎಂದು ಖರೀದಿಗೆ ತೊಡಗುತ್ತಾರೆ. ಅದರಲ್ಲೂ ಹಬ್ಬದ ಸಂದರ್ಭಗಳಲ್ಲಿ ಚಿನ್ನ ಖರೀದಿಯ ಭರಾಟೆಯ ಜೋರಾಗಿಯೇ ಇರುತ್ತದೆ. ಬಂಗಾರವಿದ್ದರೆ ಆಪತ್ತಿಗೆ ಆದೀತು ಎಂದು ಚಿನ್ನಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ನೀವೂ ಕೂಡ ಚಿನ್ನ ಖರೀದಿ ಮಾಡೋ ಪ್ಲ್ಯಾನ್ ಮಾಡಿದ್ದರೆ ಇವತ್ತಿನ ಮಾರುಕಟ್ಟೆಯ ದರವನ್ನು ನೋಡ್ಕೋಬಿಡಿ.
ಇಂದು ಸೋಮವಾರ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆಯಾದರೆ, ಬೆಳ್ಳಿ ಬೆಲೆ ಹೊಸ ದಾಖಲೆ ಬರೆದಿದೆ. ಆಭರಣ ಚಿನ್ನದ ಬೆಲೆ 9,315 ರೂನಿಂದ 9,305 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 10,151 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಕರ್ನಾಟಕ ಮೊದಲಾದ ಕಡೆ 121 ರೂಗೆ ಏರಿ ಮತ್ತೆ ಹೊಸ ದಾಖಲೆ ಬರೆದಿದೆ, ತಮಿಳುನಾಡು, ಕೇರಳ ಇತ್ಯಾದಿ ಕಡೆ ಬೆಲೆ 131 ರೂಗೆ ಏರಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 93,050 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,01,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 12,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 93,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 12,100 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 13,100 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 93,050 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,01,510 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,210 ರೂ