ದೇಶದಲ್ಲಿ ಭ್ರಷ್ಟಾಚಾರ, ಕಾಳಧನಿಕರ ಕಪ್ಪುಹಣ ಬಯಲು ಮಾಡುವ ನಿಟ್ಟಿನಲ್ಲಿ 500 ಮತ್ತು 1000ರೂ ಮುಖಬೆಲೆಯ ನೋಟುಗಳನ್ನು ರಾತ್ರೋ ರಾತ್ರಿ ಬ್ಯಾನ್ ಮಾಡಿ ಆದೇಶ ಹೊರಡಿದ ಕೇಂದ್ರ ಸರ್ಕಾರದ ನಡೆಯನ್ನು ದೇಶದಾದ್ಯಂತ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ರೂ ಚಿಲ್ಲರೆ ಹಣಕ್ಕಾಗಿ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ಮಾತ್ರ ಹೇಳತೀರದು. ಇದರ ಬಿಸಿ ವಾಹನ ಸವಾರರಿಗೂ ತಟ್ಟಿದ್ದು ಸುಳ್ಳೇನಲ್ಲ..! ದೇಶದ ಪ್ರಮುಖ ಟೋಲ್‍ಗೇಟ್‍ಗಳಲ್ಲಿ ಚಿಲ್ಲರೆ ಹಣ ಇಲ್ಲದೇ ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿನ್ನೆ ಕಂಡು ಬಂದಿತ್ತು. ಇದರಿಂದ ಗ್ರಾಹಕರ ಸಮಸ್ಯೆಯನ್ನು ನಿವಾರಿಸೋ ದೃಷ್ಠಿಯಿಂದ ಕೇಂದ್ರ ಸಚಿವ ನಿತೀನ್ ಗಡ್ಕರಿ ಎಲ್ಲಾ ಟೋಲ್‍ಗೇಟ್ಗಳಲ್ಲೂ ನ.11ರ ಮಧ್ಯರಾತ್ರಿಯವರೆಗೂ ಉಚಿತ ಪ್ರವೇಶ ಎಂದು ಆದೇಶ ಹೊರಡಿತು. ಆದರೆ ಬೆಂಗಳೂರಿನ ನೈಸ್ ರೋಡ್ ಟೋಲ್‍ಗೇಟ್‍ನಲ್ಲಿ ವಾಹನ ಸವಾರರ ಬಳಿ ಹಣ ಕೀಳುತ್ತಿದ್ದಾರೆ.. ಅಷ್ಟೇ ಅಲ್ಲ ಚಿಲ್ಲರೆ ಹಣ ನೀಡಿ ವಾಹನ ಮುಂದಕ್ಕೆ ಸಾಗಿಸಿ ಎಂದು ವಾಹನ ಸವಾರಿಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ಟೋಲ್‍ಗೇಟ್‍ನಲ್ಲೂ ಉಚಿತ ಪ್ರವೇಶ ಎಂದು ಆದೇಶ ನೀಡಿದ್ದಾರೆ ಎಂದು ಹೇಳಿದರೂ ಕೇಳದ ಅಲ್ಲಿನ ಟೋಲ್ ಸಂಗ್ರಹಾಕಾರರು ಹಣ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.. ಇದರಿಂದ ತೀವ್ರ ಆಕ್ರೋಶಗೊಂಡ ವಾಹನ ಸವಾರರು ಹಳೆಯ 500 ಮತ್ತು 1000ರೂ. ಮುಖಬೆಲೆಯ ನೋಟು ನೀಡಿದರೆ ಚಿಲ್ಲರೆ ಕೊಡಿ ಎನ್ನುತ್ತಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಪ್ರಯಾಣಿಕರು..!
Like us on Facebook The New India Times
POPULAR STORIES :
2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!
500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..
ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.
ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.
ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ
ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ