ಕುಕ್ಕರ್ನಲ್ಲಿ ಬೇಯಿಸಿದ ಅನ್ನ ಮಧುಮೇಹಿಗಳಿಗೆ ಸೂಕ್ತವಲ್ಲ! ಈ ಸ್ಟೋರಿ ನೋಡಿ
ಮನುಷ್ಯನಿಗೆ ಆರೋಗ್ಯವೇ ಪ್ರಮುಖ. ಆರೋಗ್ಯ ಇಲ್ಲದಿದ್ದರೆ ಎಷ್ಟೇ ಆಸ್ತಿ, ಅಂತಸ್ತು ಇದ್ದರೂ ಅದು ಶೂನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅನಾರೋಗ್ಯ ಹೆಚ್ಚಾಗಿ ಕಂಡುಬರುತ್ತಿದೆ. ಅದರ ಪ್ರಮುಖ ಕಾರಣ ಬದಲಾದ ಜೀವನ ಶೈಲಿ, ಒತ್ತಡ ಹಾಗೂ ಆಹಾರ ಪದ್ಧತಿ.
ಇತ್ತೀಚೆಗೆ ಮಧುಮೇಹವು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮಧುಮೇಹಿಗಳಿಗೆ ಅತ್ಯಂತ ಮುಖ್ಯ. ಅನ್ನ ತಿನ್ನುವುದರಿಂದ ತೊಂದರೆಯಾಗುತ್ತದೆ ಎಂಬ ಭಯ ಸಾಮಾನ್ಯವಾಗಿದ್ದರೂ, ಸರಿಯಾದ ರೀತಿಯಲ್ಲಿ ಅನ್ನ ತಯಾರಿಸಿ ಸೇವಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ತಜ್ಞರ ಪ್ರಕಾರ, ಮಧುಮೇಹಿಗಳಿಗೆ ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಬೇಯಿಸುವುದು ಸೂಕ್ತವಲ್ಲ. ಬದಲಿಗೆ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನವೇ ಉತ್ತಮ.
ಅದಕ್ಕಾಗಿ ಅಕ್ಕಿಯನ್ನು ಮೊದಲು 15–20 ನಿಮಿಷ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಅಕ್ಕಿಯ ಪ್ರಮಾಣಕ್ಕಿಂತ 8 ಪಟ್ಟು ಹೆಚ್ಚು ನೀರನ್ನು ಕುದಿಸಿ, ಅದರಲ್ಲಿ ನೆನೆಸಿದ ಅಕ್ಕಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಬೇಕು. ಬೇಯುವಾಗ ಪಾತ್ರೆಯ ಬಾಯನ್ನು ಮುಚ್ಚಿ, ಆಗಾಗ ಸೌಟಿನಿಂದ ಕಲೆಯುತ್ತಿರಬೇಕು.
ಅಕ್ಕಿ ಬೆಂದ ಬಳಿಕ ಅದರಲ್ಲಿರುವ ಗಂಜಿಯನ್ನು ಬಸಿದು, ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿದರೆ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ ಸಿದ್ಧವಾಗುತ್ತದೆ. ಈ ರೀತಿ ತಯಾರಿಸಿದ ಅನ್ನವನ್ನು ಮಧುಮೇಹಿಗಳು ತಮ್ಮ ಮುಖ್ಯ ಆಹಾರವಾಗಿ ಸೇವಿಸಬಹುದು.
ಪಾರಂಪರಿಕ ವಿಧಾನದಲ್ಲಿ ತಯಾರಿಸಿದ ಅನ್ನ ಸೇವನೆಯಿಂದ ದೇಹದ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.