ಇಂದು ಚಿನ್ನದ ದರ ಏರಿಕೆ! ಬೆಳ್ಳಿ ದರ ಸ್ಥಿರ, ಹೀಗಿದೆ ಇಂದು ಗೋಲ್ಡ್ ರೇಟ್ ವಿವರ
ಚಿನ್ನ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮೊದಲೆಲ್ಲಾ ಮಹಿಳೆಯರಿಗೆ ಚಿನ್ನದ ಕ್ರೇಜ್ ಹೆಚ್ಚಿತ್ತು, ಈಗ ಗಂಡಸರಿಗೂ ಈ ಚಿನ್ನದ ಆಭರಣಗಳ ಮೇಲೆ ಮನಸ್ಸಾಗಿದೆ ಎಂದರೆ ತಪ್ಪಾಗಲ್ಲ. ಚಿನ್ನದ ಬೆಲೆ ಮೊದಲೇ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚಿನ್ನದ ಬೆಲೆ ಸತತ ನಾಲ್ಕನೇ ದಿನ ಏರಿದ್ದು, ಇಂದು ಶುಕ್ರವಾರ ಗ್ರಾಮ್ಗೆ 65 ರೂ ಹೆಚ್ಚಳವಾಗಿದೆ. ಆಭರಣ ಚಿನ್ನದ ಬೆಲೆ 9,405 ರೂನಿಂದ 9,470 ರೂಗೆ ಏರಿದರೆ, ಅಪರಂಜಿ ಚಿನ್ನದ ಬೆಲೆ 10,331 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ 120 ರೂನಲ್ಲಿ ಮುಂದುವರಿದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 94,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,03,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 12,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 94,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 12,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 13,000 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 94,700 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,03,310 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,200 ರೂ