ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ
ಶಿರಾ ಶಾಸಕರಾದ ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಡಾಕ್ಟರ್ ಟಿಬಿ ಜಯಚಂದ್ರ ಅವರು ಹೀಗೆ ಕಾರಲ್ಲಿ ಸಂಚರಿಸುವಾಗ ರಸ್ತೆಯ ನೀರಲ್ಲಿ ಆಟವಾಡಿ ಮೀನು ಹಿಡಿಯುತ್ತಿದ್ದ ಬಾಲಕರನ್ನು ನಿಂತು ಮಾತನಾಡಿಸಿದ್ದಾರೆ.
ಎಸ್, ಭಾರೀ ಮಳೆಗೆ ರಸ್ತೆ ತುಂಬೆಲ್ಲಾ ನೀರು ಹರಿದು ಹೋಗುತ್ತಿದ್ದಾಗ ಕಾರು ನಿಲ್ಲಿಸಿದ ಟಿಬಿ ಜಯಚಂದ್ರ ಅವರು ತಮ್ಮಷ್ಟಕ್ಕೆ ತಾವು ಆಟ ಆಡುತ್ತಿದ್ದ ಮಕ್ಕಳನ್ನು ಕರೆದು ಮಾತನಾಡಿಸಿದ್ದಾರೆ. ಪಾಪ ಮಕ್ಕಳಿಗೆ ಶಾಸಕರೆಂದು ಅರಿವೇ ಇರದೇ ಆಟ ಆಡುತ್ತಿದ್ದಾಗ ಮಕ್ಕಳನ್ನು ಕರೆದು ಹೇ ನಾನ್ಯಾರು ಗೊತ್ತೇನ್ರೋ ಎಂದು ಪ್ರೀತಿಯಿಂದ ಕೇಳಿದ್ದಾರೆ.
ಅಲ್ಲದೇ ಚೀಲದಲ್ಲಿ ಏನದು ತೋರಿಸಿ ಎಂದಾಗ ಬಾಲಕರು ತಾವು ಹಿಡಿದ ಮೀನುಗಳನ್ನು ಶಾಸಕರಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಶಾಸಕರು ನಕ್ಕು ಅಲ್ಲಿಂದ ತೆರಳಿದರು. ಈ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಶಾಸಕರ ಸರಳತೆಗೆ ಜನತೆ ಮೆಚ್ಚುಗೆ ಸೂಚಸಿದ್ದಾರೆ