ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಧಾನಿಯವರ ಭಾಷಣವು ಮುಖ್ಯವಾಗಿ ಜಿಎಸ್ಟಿ ಸುಧಾರಣೆಗಳ ಮೇಲೆ ಕೇಂದ್ರೀಕರಿಸಬಹುದೆಂದು ಮಾಧ್ಯಮ ವರದಿಗಳು ತಿಳಿಸಿವೆ. ನಾಳೆಯಿಂದಲೇ ದೇಶದಲ್ಲಿ ಜಾರಿಯಾಗಲಿರುವ ಹೊಸ ಜಿಎಸ್‌ಟಿ 2.0 ದರಗಳು ಈ ಭಾಷಣದಲ್ಲಿ ಪ್ರಮುಖ ಅಂಶವಾಗುವ ಸಾಧ್ಯತೆ ಇದೆ.
ಇದೇ ವೇಳೆ ಅಮೆರಿಕದ ವೀಸಾ ನೀತಿ ಬದಲಾವಣೆಗಳೂ ಚರ್ಚೆಯಲ್ಲಿವೆ. ವಿಶೇಷವಾಗಿ H1B ವೀಸಾ ಹೊಂದಿರುವವರ ಮೇಲೆ ಅಮೆರಿಕ ಕೈಗೊಂಡಿರುವ ಕಠಿಣ ಕ್ರಮಗಳು ಭಾರತೀಯ ಐಟಿ ತಂತ್ರಜ್ಞಾನ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಂಭವವಿದೆ.
ಅಮೆರಿಕ ಈಗಾಗಲೇ ಭಾರತದ ಮೇಲಿನ ಸುಂಕವನ್ನು ಹೆಚ್ಚಿಸಿದ್ದು, ಶೇಕಡಾ 50ರಷ್ಟು ಆಮದು ಶುಲ್ಕವನ್ನು ವಿಧಿಸಿದೆ. ಜೊತೆಗೆ H1B ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ ಎಂದು ನಿಗದಿ ಮಾಡಲಾಗಿದೆ. ಇದು ವಾರ್ಷಿಕ ಶುಲ್ಕವಲ್ಲ, ಒಮ್ಮೆ ಪಾವತಿಸುವಂತದ್ದು. ಈಗಾಗಲೇ ವೀಸಾ ಪಡೆದವರು ಬೇರೆ ದೇಶಗಳಿಗೆ ಹೋಗಿ ಮತ್ತೆ ಮರಳಿದರೂ ಅವರಿಗೆ ಪುನಃ ಶುಲ್ಕ ವಿಧಿಸುವುದಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.