ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್
ಮೈಸೂರು: ಭೂಮಿ ಯಾರನ್ನೂ ಹೊರತಳ್ಳುವುದಿಲ್ಲ, ಗಡಿ ಹಾಕುವುದು ಮನುಷ್ಯ. ಅದನ್ನು ನಾವು ಅಳಿಸಬೇಕು. ಆಸ್ತಿಯಿಂದಲ್ಲ, ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ಹಿರಿಯ ಸಾಹಿತಿ ಹಾಗೂ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಕರೆ ನೀಡಿದರು.
ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಉತ್ಸವದ ಉದ್ಘಾಟನೆ ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದದಿಂದ ನಡೆದಿದೆ. ನನ್ನ ಆಪ್ತ ಗೆಳತಿ ಒಮ್ಮೆ ‘ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿದ್ದರು. ಆದರೆ ಇಂದು ತಾಯಿ ಚಾಮುಂಡೇಶ್ವರಿ ತಾನೇ ನನ್ನನ್ನು ಕರೆಸಿಕೊಂಡಿದ್ದಾಳೆ. ವಿರೋಧಗಳಿದ್ದರೂ ತಾಯಿ ತನ್ನ ನೆರಳಿನಲ್ಲಿ ನನ್ನನ್ನು ಇಲ್ಲಿ ನಿಲ್ಲಿಸಿದ್ದಾಳೆ.
ಇದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ” ಎಂದರು. ದಸರಾ ನಾಡಿನ ಸಂಸ್ಕೃತಿ ಹಾಗೂ ಸಮನ್ವಯದ ಉತ್ಸವ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಇದರ ಅರ್ಹತೆ ಇದೆ. ಎಲ್ಲರನ್ನೂ ಒಳಗೊಂಡು ಆಚರಿಸುವ ಹಬ್ಬ ಇದಾಗಿದೆ” ಎಂದು ಹೇಳಿದರು.