ಬ್ರಹ್ಮಚಾರಿಣಿಯ ಪೂಜಾ ವಿಧಾನ !

Date:

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.
ಇವರು ತಪಸ್ಸು, ಧೈರ್ಯ, ಶ್ರದ್ಧೆ ಮತ್ತು ಬ್ರಹ್ಮಜ್ಞಾನಕ್ಕೆ ಪ್ರತೀಕ.

ಬ್ರಹ್ಮಚಾರಿಣಿ ಹಿನ್ನಲೆ ನೋಡೊದಾದ್ರೆ,

ಬ್ರಹ್ಮಚಾರಿಣಿ ಎಂಬ ರೂಪದಲ್ಲಿ ಪಾರ್ವತಿ ದೇವಿ, ಶ್ರೇಷ್ಠ ತಪಸ್ಸು ಮಾಡಿ ಶಂಕರನನ್ನು ಪತಿ ರೂಪದಲ್ಲಿ ಪಡೆದಳು. ಇವರ ಕೈಯಲ್ಲಿ ಜಪಮಾಲೆ ಮತ್ತು ಕಮಂಡಲ ಇರುತ್ತದೆ. ತಪಸ್ಸು, ಧೈರ್ಯ ಮತ್ತು ಜ್ಞಾನಕ್ಕಾಗಿ ಆರಾಧನೆ ಮಾಡಲಾಗುತ್ತದೆ.

ಬ್ರಹ್ಮಚಾರಿಣಿ ಪೂಜಾ ವಿಧಾನ

  1. ಬೆಳಗ್ಗೆ ಸ್ನಾನ ಮಾಡಿ ಸ್ವಚ್ಛ ವಸ್ತ್ರ ಧರಿಸಬೇಕು.
  2. ಕಲಶ ಪೂಜೆ ಮಾಡಿ, ಬ್ರಹ್ಮಚಾರಿಣಿ ದೇವಿಯ ವಿಗ್ರಹ/ಚಿತ್ರಕ್ಕೆ ಕುಂಕುಮ, ಹೂವು, ಅಕ್ಷತೆ ಅರ್ಪಿಸಬೇಕು.
  3. ಬೆಳ್ಳಿಯ ದೀಪ ಹಚ್ಚಿ ನೈವೇದ್ಯ ಸಮರ್ಪಿಸಬೇಕು.
  4. ಜಪಮಾಲೆಯೊಂದಿಗೆ ದೇವಿಯ ಮಂತ್ರ ಪಠಣ ಮಾಡುವುದು ಶುಭಕರ.

ಬ್ರಹ್ಮಚಾರಿಣಿ ಮಂತ್ರ

ಓಂ ದೇವಿ ಬ್ರಹ್ಮಚಾರಿಣ್ಯ ನಮಃ
(Om Devi Brahmacharinyai Namah)

ಇಷ್ಟವಾದ ಬಣ್ಣ, ಆಹಾರ, ಹೂ

ಬಣ್ಣ: ಬಿಳಿ (ಶುದ್ಧಿ, ಶಾಂತಿಯ ಸಂಕೇತ)
ಆಹಾರ: ಸಕ್ಕರೆ, ಬೆಲ್ಲ, ಹಾಲು ಹಾಗೂ ಫಲಗಳು,
ಹೂ: ಅಕ್ಕಿ ಹೂವು ಅಥವಾ ಬಿಳಿ ಹೂವುಗಳು

ಪೂಜೆಯಿಂದ ಆಗುವ ಲಾಭ

ತಪಸ್ಸು, ಶ್ರದ್ಧೆ, ಧೈರ್ಯ, ಜ್ಞಾನ ಹಾಗೂ ಸಮಾಧಾನ ದೊರೆಯುತ್ತದೆ.

ವಿದ್ಯಾರ್ಥಿಗಳಿಗೆ ವಿದ್ಯೆ, ಸಾಧಕರಿಗೆ ತಪಸ್ಸಿನ ಶಕ್ತಿ, ಗೃಹಸ್ಥರಿಗೆ ಸಮೃದ್ಧಿ ದೊರಕುತ್ತದೆ. ಮನಸ್ಸು ಸ್ಥಿರವಾಗಿ, ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ.‌

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...