ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ
ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರ ಬೇಡಿಕೆಯ ಹಿನ್ನೆಲೆಯಲ್ಲಿ ಬಂಗಾರದ ದರ ಏರುತ್ತಿರುವುದು ಒಂದು ಕಾರಣವಾದರೆ, ಇದರ ಜೊತೆಗೆ ಇತರೆ ವಿದ್ಯಮಾನಗಳು ಕೂಡ ಬೆಲೆ ಏರಿಕೆಗೆ ಸಾತ್ ನೀಡುತ್ತಿವೆ. ಭಾರತದಂತಹ ದೇಶದಲ್ಲಿ ಚಿನ್ನಕ್ಕೆ ವಿಶಿಷ್ಟವಾದ ಸ್ಥಾನವಿದೆ.
ಇಲ್ಲಿ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಬಹುಶಃ ಭಾರತದಲ್ಲಿರುವ ಕುಟುಂಬಗಳ ಬಳಿಯಲ್ಲಿರುವ ಚಿನ್ನದ ಸಂಗ್ರಹ ಜಗತ್ತಿನ ಇನ್ನ್ಯಾವ ದೇಶದಲ್ಲೂ ಇರಲಿಕ್ಕಿಲ್ಲ, ಇದನ್ನು ಕೆಲ ವರದಿಗಳೂ ಸಹ ಪುಷ್ಟಿಕರಿಸಿವೆ ಎನ್ನಬಹುದು.
ಚಿನ್ನದ ಬೆಲೆ ಇಂದು ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ಬದಲಾವಣೆ ಇಲ್ಲ. ಆಭರಣ ಚಿನ್ನದ ಬೆಲೆ 10,575 ರೂನಿಂದ 10,490 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 11,444 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 140 ರೂ ಇದ್ದರೆ, ಚೆನ್ನೈ ಹಾಗೂ ಇನ್ನೂ ಕೆಲವೆಡೆ ಬೆಲೆ 150 ರೂ ಆಗಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 25ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 8,583 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,444 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,490 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 140 ರೂ