Asia Cup 2025 Final: ಇಂದು ಭಾರತ vs ಪಾಕ್ ಫೈನಲ್ ಪಂದ್ಯ: ಹೀಗಿರಲಿದೆ ಭಾರತದ ಪ್ಲೇಯಿಂಗ್ 11
ದುಬೈ: ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಏಷ್ಯಾಕಪ್ 2025 ಫೈನಲ್ ಇಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭರ್ಜರಿಯಾಗಿ ನಡೆಯಲಿದೆ. ಈ ಹೈ ವೋಲ್ಟೇಜ್ ಪಂದ್ಯಕ್ಕೆ ಮುನ್ನ, ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಕುರಿತಾಗಿ ಕುತೂಹಲ ಹೆಚ್ಚಿದೆ.
ಸೂಪರ್-4 ಹಂತದ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸ್ನಾಯು ಸೆಳೆತಕ್ಕೆ ಒಳಗಾದರೆ, ತಿಲಕ್ ವರ್ಮಾ ಕಾಲಿಗೆ ಗಾಯಗೊಂಡಿದ್ದರು. ಹೀಗಾಗಿ ಇಬ್ಬರೂ ಫೈನಲ್‌ನಲ್ಲಿ ಆಡುವುದೇ ಎಂಬುದು ಅನುಮಾನ.
ಇವರಿಬ್ಬರೂ ಹೊರಗುಳಿದರೆ, ಭಾರತ ತಂಡದಲ್ಲಿ ಎರಡು ಬದಲಾವಣೆಗಳು ಅನಿವಾರ್ಯ. ಹಿಂದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಫೈನಲ್‌ನಲ್ಲಿ ಖಚಿತವಾಗಿ ಆಡಲಿದ್ದಾರೆ. ಇದರಿಂದ ಹರ್ಷಿತ್ ರಾಣಾ ಹೊರಗುಳಿಯಲಿದ್ದಾರೆ.
ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಶುಭ್ಮನ್ ಗಿಲ್
ಅಭಿಷೇಕ್ ಶರ್ಮಾ
ಸೂರ್ಯಕುಮಾರ್ ಯಾದವ್
ತಿಲಕ್ ವರ್ಮಾ / ರಿಂಕು ಸಿಂಗ್
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
ಹಾರ್ದಿಕ್ ಪಾಂಡ್ಯ / ಶಿವಂ ದುಬೆ
ಅಕ್ಷರ್ ಪಟೇಲ್
ಜಸ್ಪ್ರೀತ್ ಬುಮ್ರಾ
ಅರ್ಷದೀಪ್ ಸಿಂಗ್
ಕುಲ್ದೀಪ್ ಯಾದವ್
ವರುಣ್ ಚಕ್ರವರ್ತಿ