ಮೂಸಂಬಿ ಜ್ಯೂಸ್ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
ಮೂಸಂಬಿ ಹಣ್ಣು ಯಾವ ಋತುಮಾನದಲ್ಲೂ ಸೇವಿಸಬಹುದಾದ, ಆರೋಗ್ಯಕ್ಕಾಗಿ ಅನೇಕ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಇದನ್ನು ನೇರವಾಗಿ ಹಣ್ಣಿನ ರೂಪದಲ್ಲಿ ಅಥವಾ ರಸ ರೂಪದಲ್ಲಿ ಸೇವಿಸಬಹುದು. ವಿಟಮಿನ್ C, ರಂಜಕ ಮತ್ತು ಪೊಟ್ಯಾಸಿಯಮ್‌ಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ದೇಹವನ್ನು ಹಾನಿಕಾರಕ ಸೋಂಕುಗಳಿಂದ ರಕ್ಷಿಸುತ್ತದೆ.
ಮೂಸಂಬಿಯ ಪ್ರಮುಖ ಆರೋಗ್ಯ ಲಾಭಗಳು:
ಜೀರ್ಣ ಸಮಸ್ಯೆ ನಿವಾರಣೆ: ನಿಯಮಿತವಾಗಿ ಮೂಸಂಬಿ ರಸ ಸೇವನೆಯಿಂದ ಅಜೀರ್ಣ, ಕರುಳಿನ ಚಲನೆ ಅಸ್ತವ್ಯಸ್ತತೆ, ಮತ್ತು ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗುತ್ತವೆ.
ವಿಷಹರಣ: ದೇಹದಿಂದ ವಿಷವನ್ನು ಹೊರಹಾಕಲು ಸಹಾಯಕ. ಜೊತೆಗೆ ಅತಿಸಾರ, ವಾಂತಿ ಮತ್ತು ಸೆಳೆತವನ್ನು ತಗ್ಗಿಸುತ್ತದೆ.
ಕಣ್ಣು ಮತ್ತು ಹೃದಯದ ಆರೋಗ್ಯ: ಉತ್ಕರ್ಷಣ ನಿರೋಧಕಗಳು ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿ, ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
ಚರ್ಮದ ಆರೈಕೆ: ವಿಟಮಿನ್ C ಮತ್ತು ಉತ್ಕರ್ಷಣ ನಿರೋಧಕಗಳು ಕಾಲಜನ್ ಉತ್ಪಾದನೆ ಹೆಚ್ಚಿಸಿ, ವಯಸ್ಸಿನ ಲಕ್ಷಣಗಳನ್ನು ತಗ್ಗಿಸುತ್ತವೆ.
ರಕ್ತದೊತ್ತಡ ನಿಯಂತ್ರಣ: ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡಲು ಸಹಕಾರಿ.
ಸಂಧಿವಾತಕ್ಕೆ ನೆರವು: ಉರಿಯೂತ ಮತ್ತು ಊತವನ್ನು ಕಡಿಮೆ ಮಾಡಿ, ಅಸ್ಥಿಸಂಧಿವಾತ ಹಾಗೂ ರುಮಟಾಯ್ಡ್ ಸಂಧಿವಾತ ಲಕ್ಷಣಗಳನ್ನು ತಗ್ಗಿಸುತ್ತದೆ.
ಜೀರ್ಣಾಂಗ ಉತ್ತೇಜನೆ: ಫ್ಲೇವನಾಯ್ಡ್ಗಳು ಜೀರ್ಣಕಾರಿ ರಸಗಳ ಸ್ರವವನ್ನು ಉತ್ತೇಜಿಸಿ, ಜಠರಗರುಳಿನ ಸಮಸ್ಯೆಗಳನ್ನು ನಿವಾರಣೆ ಮಾಡುತ್ತವೆ.
ವೈದ್ಯಕೀಯ ಪರಿಣಿತರ ಪ್ರಕಾರ, ಬೆಳಿಗ್ಗೆ ಹೊಟ್ಟೆ ಖಾಲಿ ಇರುವ ವೇಳೆ ಮೂಸಂಬಿ ರಸ ಸೇವನೆ ಮಾಡಿದರೆ ಅದರ ಆರೋಗ್ಯ ಲಾಭಗಳು ಇನ್ನಷ್ಟು ಹೆಚ್ಚುತ್ತವೆ.