ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್, ಫೆಬ್ರವರಿಯಲ್ಲಿ ಮದುವೆ?
ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕುರಿತಾಗಿ ಹೊಸ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವರದಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.
ಅಕ್ಟೋಬರ್ 3ರಂದು ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆಯಂತೆ. ಕಾರ್ಯಕ್ರಮವನ್ನು ಸಂಪೂರ್ಣ ಖಾಸಗಿಯಾಗಿ ನಡೆಸಲಾಗಿದ್ದು, ಯಾವುದೇ ಫೋಟೋ ಅಥವಾ ವೀಡಿಯೋ ಲೀಕ್ ಆಗದಂತೆ ನೋಡಿಕೊಳ್ಳಲಾಗಿದೆ.
ರಶ್ಮಿಕಾ ಹಾಗೂ ವಿಜಯ್ ಮೊದಲ ಬಾರಿಗೆ 2018ರಲ್ಲಿ ಬಿಡುಗಡೆಯಾದ ಗೀತಾ ಗೋವಿಂದಂ ಚಿತ್ರದ ಸೆಟ್‌ನಲ್ಲಿ ಭೇಟಿಯಾಗಿದ್ದರು. ಚಿತ್ರ ಸೂಪರ್‌ಹಿಟ್ ಆದ ನಂತರ ಇವರಿಬ್ಬರ ನಡುವೆ ಆಪ್ತ ಬಾಂಧವ್ಯ ಬೆಳೆದಿದ್ದು, ಇದೀಗ ಅದಕ್ಕೆ ಹೊಸ ಅರ್ಥ ಸಿಕ್ಕಂತಾಗಿದೆ.
ನಿಶ್ಚಿತಾರ್ಥದ ವೇಳೆ ಮದುವೆಯ ದಿನಾಂಕವೂ ನಿಗದಿ ಮಾಡಲಾಗಿದೆ. ಫೆಬ್ರವರಿಯಲ್ಲಿ ಇವರ ಮದುವೆ ನಡೆಯಲಿದ್ದು, ಅದನ್ನು ಅದ್ದೂರಿಯಾಗಿ ಆಚರಿಸುವ ಯೋಜನೆ ಇದೆ. ಅನೇಕ ಸೆಲೆಬ್ರಿಟಿಗಳು ಈ ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ.