ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

Date:

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಬೆಂಗಳೂರು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಯೆಲ್ಲೋ ಲೈನ್ ಮೆಟ್ರೋ ಈಗ ಮತ್ತೊಮ್ಮೆ ಹೊಸ ಬೆಳವಣಿಗೆ ಕಂಡಿದೆ. ಮೊದಲಿಗೆ ಕೇವಲ 3 ರೈಲುಗಳು ಸಂಚಾರ ಮಾಡುತ್ತಿದ್ದವು. ನಂತರ ಮತ್ತೊಂದು ರೈಲು ಸೇರಿಸಲಾಗಿತ್ತು. ಇದೀಗ BMRC ನಿರ್ಧಾರದಂತೆ ಐದನೇ ರೈಲು ಸಂಚಾರಕ್ಕೆ ಚಾಲನೆ ನೀಡಲು ಸಿದ್ಧವಾಗಿದೆ, ಮೆಟ್ರೋ ಪ್ರಯಾಣಿಕರಿಗೆ ಸಂತೋಷದ ಸುದ್ದಿಯಾಗಿದೆ.

ಮೆಟ್ರೋ ಮಾರ್ಗವನ್ನು ಮೋದಿ ಆಗಸ್ಟ್ 10ರಂದು ಉದ್ಘಾಟಿಸಿದ್ದರು. BMRCL ಮೂಲಕ ಪ್ರಾರಂಭದಲ್ಲಿ ನಾಲ್ಕು ರೈಲುಗಳಿದ್ದ ಕಾರಣ ಮೆಟ್ರೋ 19 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿದ್ದರೆ, ಐದನೇ ರೈಲು ಚಾಲನೆ ನಂತರ ಹದಿನೈದು ನಿಮಿಷಕ್ಕೊಂದು ರೈಲು ಸಂಚಾರ ಸಾಧ್ಯವಾಗಲಿದೆ.

ಕೊಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್‌ನಿಂದ ಹೊಸ ಬೋಗಿಗಳು ಸೆಪ್ಟೆಂಬರ್ 19ರಂದು ಬೆಂಗಳೂರಿಗೆ ಬಂದಿದ್ದು, ಎಲ್ಲಾ ಬೋಗಿಗಳ ಜೋಡಣೆ ನಂತರ 20 ದಿನಗಳ ಪರೀಕ್ಷೆ ನಡೆಯಲಿದೆ ಎಂದು BMRCL ತಿಳಿಸಿದ್ದಾರೆ. ಇಂದಿನಿಂದ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈ ಪರೀಕ್ಷೆಗಾಗಿ ರೈಲು ಸಂಚಾರಕ್ಕೆ ಒಳಪಡಿಸಲಾಗುತ್ತಿದೆ.

ಹಳದಿ ಮಾರ್ಗದರಿಂದ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಒಟ್ಟಾರೆ ಮೆಟ್ರೋ ಜಾಲವು ಈಗ 96 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೀಘ್ರದಲ್ಲೇ ದಿನಕ್ಕೆ 12.5 ಲಕ್ಷ ಪ್ರಯಾಣಿಕರನ್ನು ತಲುಪಲಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ ಎಂದು ವರದಿ ತಿಳಿಸಿದೆ.

Share post:

Subscribe

spot_imgspot_img

Popular

More like this
Related

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ ಶೋಕ

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ...

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ ಬೆಂಗಳೂರು:...

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...