ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

Date:

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಅಂಥದ್ದರಲ್ಲಿ ಈಗ ಹಬ್ಬಗಳ ಋತು ಆರಂಭವಾಗಿದ್ದು ಚಿನ್ನಕ್ಕೆ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆಯಿದೆ.

ಕಳೆದ ಹಲವು ದಿನಗಳಿಂದ ಚಿನ್ನದ ದರ ಸಾಕಷ್ಟು ಏರಿಳಿತ ಕಾಣುತ್ತಲೆ ಮುನ್ನಡೆದಿದೆ. ಇಲ್ಲಿಯವರೆಗೆ ಹೋಲಿಸಿದರೆ ತನ್ನ ಗರಿಷ್ಠ ಬೆಲೆಯನ್ನು ದಾಖಲಿಸಿದ್ದ ಚಿನ್ನ ನಂತರದ ದಿನಗಳಲ್ಲಿ ಮತ್ತೆ ತಗ್ಗಿ ಇದೀಗ ತನ್ನ ಏರಿಕೆಯ ಓಟವನ್ನು ಮತ್ತೆ ಮುಂದುವರೆಸುತ್ತಿರುವಂತೆ ಸಾಗಿದೆ.

ಚಿನ್ನದ ಬೆಲೆ 115 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 11,070 ರೂ ಇದ್ದದ್ದು 11,185 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,202 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 157 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ 167 ರೂ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,11,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,22,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,11,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 15,700 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,700 ರೂ ಇದೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...