RSS ಬ್ಯಾನ್ ಕೇಳಿರೋದು ನಿಮ್ಮ ಕಲ್ಪನೆ, ನಿಜವಲ್ಲ – ಖರ್ಗೆ ಸ್ಪಷ್ಟನೆ”
ಬೆಂಗಳೂರು:- “ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂದು ನಾನು ಎಲ್ಲಿಯೂ ಹೇಳಿಲ್ಲ,” ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಪರಿವಾರದ ಚಟುವಟಿಕೆಗಳಿಗೆ ವಿರೋಧವಿದ್ದರೂ, ಸಂಘವನ್ನು ನಿಷೇಧಿಸಬೇಕೆಂದು ಹೇಳಿರುವುದಿಲ್ಲವೆಂದು ವಿವರಿಸಿದರು.
“ಸರ್ಕಾರಿ ಶಾಲೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳು ನಡೆಯಬಾರದು ಎಂದು ನಾನು ಹೇಳಿದ್ದಾರೆ. ಆದರೆ ಸಂಘವನ್ನು ನಿಷೇಧಿಸಬೇಕು ಎಂಬ ಮಾತು ನನ್ನಿಂದ ಬಂದಿಲ್ಲ,” ಎಂದು ಖರ್ಗೆ ಹೇಳಿದರು.
ಈ ಹಿಂದೆ ನಟ ಮತ್ತು ಬಿಜೆಪಿ ಶಾಸಕ ಮುನಿರತ್ನ ಅವರು ಆರ್‌ಎಸ್‌ಎಸ್ ಪರ ವೇಷಧಾರಣೆಯೊಂದಿಗೆ ಗಾಂಧೀಜಿಯ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ, “ಅವರಿಗೆ ಆರ್‌ಎಸ್‌ಎಸ್ ಇತಿಹಾಸ ಗೊತ್ತಿಲ್ಲದಂತಿದೆ. ಸಂಘವು 55 ವರ್ಷಗಳ ನಂತರ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದನ್ನು ಬಿಟ್ಟರೆ, ಇವು ಜನರಿಗೆ ತಿಳಿದಿಲ್ಲ. ಹಾಗಾಗಿ ಅವರ ನಡೆ ಹಾಸ್ಯಾಸ್ಪದವಾಗಿದೆ,” ಎಂದು ಟೀಕಿಸಿದರು.
ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೃಹಸಚಿವರಾಗಿದ್ದಾಗ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ಗೃಹಸಚಿವರಾಗಿದ್ದಾಗ ತಮ್ಮ ಜವಾಬ್ದಾರಿಯನ್ವಯ ಸೇರಿದ್ದಷ್ಟು ಮಾತ್ರ. ಶಾಖೆಗೆ ಹೋಗಿದ್ದಲ್ಲ, ಅಲ್ಲಿ ಶಿಸ್ತು ನಿಯಮ ಪಾಲನೆ ಮಾಡಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಜೊತೆ ಹೋಗಿದ್ದರು,” ಎಂದು ಸ್ಪಷ್ಟನೆ ನೀಡಿದರು.