ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್ ರಾಜ್ ಸೇರಿ 70 ಮಂದಿಗೆ ಗೌರವ
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಬಾರಿ ವಿವಿಧ ಕ್ಷೇತ್ರಗಳಿಂದ ಒಟ್ಟು 70 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅವರ ಪೈಕಿ ಹಿರಿಯ ನಟ ಪ್ರಕಾಶ್ ರಾಜ್ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿ, ಈ ಕುರಿತು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ‘ಹಿರಿಯ ಕೋಣಂದೂರು ಲಿಂಗಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಪೌರ ಕಾರ್ಮಿಕರಾದ ಫಕೀರವ್ವ ಅವರಿಗೂ ಪ್ರಶಸ್ತಿ ನೀಡಲಾಗಿದೆ. ವೀಣೆಬ್ರಹ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದ ಪೆನ್ನ ಓಬಳಯ್ಯ, ಐಎಎಸ್ ಅಧಿಕಾರಿ ಸಿದ್ದಯ್ಯ, ನಟ ಪ್ರಕಾಶ್ ರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ 6 ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.
ಪ್ರಶಸ್ತಿಯಲ್ಲಿ 22 ಕ್ಯಾರಟ್‌ಗ 25 ಗ್ರಾಂ ಚಿನ್ನ. 5 ಲಕ್ಷ ಹಣದ ಚೆಕ್ ಹಾಗೂ ಪ್ರಮಾಣ ಪತ್ರ,ಭುವನೇಶ್ವರಿ ವಿಗ್ರಹ, ಶಾಲು, ಫಲಕ ವಿತರಣೆ ಮಾಡಲಾಗುತ್ತದೆ. ನ.1 ರ ಸಂಜೆ ಚಹಾ ಕೂಟ ಆಯೋಜನೆಯಾಗಲಿದ್ದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಜಾನಪದ ಕ್ಷೇತ್ರ
ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ – ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು – ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ – ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ – ಚಿತ್ರದುರ್ಗ
ಎಂ. ತೋಪಣ್ಣ – ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ
ಸಿಂಧು ಗುಜರನ್ದ – ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ – ಮೈಸೂರು
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ – ಶಿವಮೊಗ್ಗ
ತುಂಬಾಡಿ ರಾಮಯ್ಯ – ತುಮಕೂರು
ಪ್ರೊ. ಅರ್. ಸುನಂದಮ್ಮ – ಚಿಕ್ಕಬಳ್ಳಾಪುರ
ಡಾ. ಎಚ್.ಎಲ್. ಪುಷ್ಪ – ತುಮಕೂರು
ರಹಮತ್ ತರೀಕೆರೆ – ಚಿಕ್ಕಮಗಳೂರು
ಹ.ಮ. ಪೂಜಾರ – ವಿಜಯಪುರ
ಚಲನಚಿತ್ರ / ಕಿರುತೆರೆ
ಪ್ರಕಾಶ್ ರಾಜ್ – ದಕ್ಷಿಣ ಕನ್ನಡ
ವಿಜಯಲಕ್ಷ್ಮೀ ಸಿಂಗ್ – ಕೊಡಗು
ಆಡಳಿತ ಕ್ಷೇತ್ರ
ಹೆಚ್. ಸಿದ್ದಯ್ಯ, ಭಾ.ಆ.ಸೇ (ನಿ) – ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ ಕ್ಷೇತ್ರ
ಆಲಮ್ಮ ಮಾರಣ್ಣ – ತುಮಕೂರು
ಡಾ. ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಮತಿ. ಸೂಲಗಿತ್ತಿ ಈರಮ್ಮ – ವಿಜಯನಗರ
ಫಕ್ಕೀರಿ – ಬೆಂಗಳೂರು ಗ್ರಾಮಾಂತರ
ಕೋರಿನ್ ಆಂಟೊನಿಯಟ್ ರಸ್ಕೀನಾ – ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ – ಉಡುಪಿ
ಕೋಣಂದೂರು ಲಿಂಗಪ್ಪ – ಶಿವಮೊಗ್ಗ
ಉಮೇಶ ಪಂಬದ – ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ – ಧಾರವಾಡ
ಕೆ. ದಿನೇಶ್ – ಬೆಂಗಳೂರು
ಶಾಂತರಾಜು – ತುಮಕೂರು
ಜಾಫರ್ ಮೊಹಿಯುದ್ದೀನ್ – ರಾಯಚೂರು
ಪೆನ್ನ ಓಬಳಯ್ಯ – ಬೆಂಗಳೂರು ಗ್ರಾಮಾಂತರ
ಬಾಯಿ – ಬಳ್ಳಾರಿ
ಪುಂಡಲೀಕ ಶಾಸ್ತ್ರೀ (ಬುಡಬುಡಕೆ) – ಬೆಳಗಾವಿ
ಹೊರನಾಡು / ಹೊರದೇಶ
ಜಕರಿಯ ಬಜಪೆ – ಸೌದಿ ಅರೇಬಿಯಾ
ಪಿ.ವಿ. ಶೆಟ್ಟಿ – ಮುಂಬೈ
ಪರಿಸರ ಕ್ಷೇತ್ರ
ರಾಮೇಗೌಡ – ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ – ಯಾದಗಿರಿ
ಕೃಷಿ ಕ್ಷೇತ್ರ
ಡಾ. ಎಸ್.ವಿ. ಹಿತ್ತಲಮನಿ – ಹಾವೇರಿ
ಎಂ.ಸಿ. ರಂಗಸ್ವಾಮಿ – ಹಾಸನ






