ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆಯಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಆರೋಪಿಗಳ ವಿರುದ್ಧದ ದೋಷಾರೋಪ ನಿಗದಿ ನವೆಂಬರ್ 3 ರಂದು ನಡೆಯಲಿದೆ ಎಂದು ಬೆಂಗಳೂರು 57ನೇ ಸಿಸಿಎಚ್ ನ್ಯಾಯಾಲಯ ನಿರ್ಧರಿಸಿದೆ.
ಇಂದು ನಡೆದ ವಿಚಾರಣೆಯಲ್ಲಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಿದ್ದರು. ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಹಾಜರಾತಿ ದಾಖಲಾದ ನಂತರ, ನ್ಯಾಯಾಲಯವು ಪ್ರಾಥಮಿಕ ವಿಚಾರಣೆ ನಡೆಸಿತು.
ನ್ಯಾಯಾಧೀಶರು ವಿಚಾರಣೆಯ ವೇಳೆ ದೋಷಾರೋಪ ನಿಗದಿ ಪ್ರಕ್ರಿಯೆಯನ್ನು ನವೆಂಬರ್ 3ಕ್ಕೆ ಮುಂದೂಡಿಕೆ ಮಾಡಿ, ಅದೇ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನವೆಂಬರ್ 3ರಂದು ಕೋರ್ಟ್, ಆರೋಪಿಗಳ ವಿರುದ್ಧ ಯಾವ್ಯಾವ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ಮುಂದುವರಿಯಬೇಕು ಎಂಬುದನ್ನು ಅಧಿಕೃತವಾಗಿ ಘೋಷಿಸಲಿದೆ.



