ಬಾಂಗ್ಲಾ ಹಿಂಸಾಚಾರದ ಪ್ರಕರಣ: ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ ವಿಧಿಸಿದ ‘ICT’
ಢಾಕಾ: ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕೆಲವರು ಸಾವನ್ನಪ್ಪಿದ್ದರು. ಇದರ ವಿರುದ್ಧ ಸ್ಪೆಷಲ್ ಟ್ರಿಬ್ಯೂನಲ್ ನಲ್ಲಿ ಶೇಖ್ ಹಸೀನಾ ಹಾಗೂ ಅವರ ಸರ್ಕಾರದ ವಿರುದ್ಧ ಕೇಸ್ ದಾಖಲಾಗಿತ್ತು. ಈ ಕೇಸ್ ನಲ್ಲಿ ಶೇಖ್ ಹಸೀನಾ ಅಪರಾಧಿ ಎಂದು ಸ್ಪೆಷಲ್ ಟ್ರಿಬ್ಯೂನಲ್ ತೀರ್ಪು ನೀಡಿದೆ. ಜೊತೆಗೆ ಶೇಖ್ ಹಸೀನಾ ಅವರಿಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ .
ಕಳೆದ ವರ್ಷ, 2024ರ ಜುಲೈ-ಆಗಸ್ಟ್‌ನಲ್ಲಿ, ಢಾಕಾದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಭದ್ರತಾ ಪಡೆಗಳ ಫೈರಿಂಗ್ ಮತ್ತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸುಮಾರು 1,400 ಮಂದಿ ಸಾವನ್ನಪ್ಪಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿದೆ. ಘಟನೆಗೆ ನೇರ ಕಾರಣವಾಗಿ ಶೇಖ್ ಹಸೀನಾಗೆ ಆರೋಪ ನೀಡಲಾಗಿದೆ.
ಇದರ ಜೊತೆಗೆ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅಸಾದುಜಮನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಕಮೀಷನರ್ ಚೌಧರಿ ಅಬ್ದುಲ್ಲಾ ಆಲ್ ಮಾಮುನ್ ವಿರುದ್ಧವೂ ಮಾನವೀಯತೆ ವಿರುದ್ಧ ಅಪರಾಧ ಆರೋಪದಡಿ ಪ್ರಕರಣ ದಾಖಲಾಗಿದೆ. ಸಾಕ್ಷಿಗಳ ಹೇಳಿಕೆ ಮತ್ತು ಸ್ಥಳೀಯ ಪೊಲೀಸ್ ವೀಡಿಯೋ ದಾಖಲೆಗಳನ್ನು ಟ್ರಿಬ್ಯೂನಲ್‌ನಲ್ಲಿ ಪರಿಶೀಲಿಸಲಾಗಿದೆ. ಸ್ಪೆಷಲ್ ಟ್ರಿಬ್ಯೂನಲ್ ತೀರ್ಪಿನಲ್ಲಿ, ಶೇಖ್ ಹಸೀನಾ 2018ರ ಪಾರ್ಲಿಮೆಂಟ್ ಚುನಾವಣೆಯ ವೇಳೆ ತಮ್ಮ ಪಕ್ಷದ ಕಾರ್ಯಕರ್ತರ ಮೂಲಕ ಮತದಾನದ ಹಸ್ತಕ್ಷೇಪ ಮಾಡಿರುವುದಕ್ಕೂ ಉಲ್ಲೇಖಿಸಲಾಗಿದೆ.






